ದಿಲ್ಲಿ ಕಾರು ಸ್ಪೋಟ ಪ್ರಕರಣ | ಆರೋಪಿಗೆ ನಂಟಿದೆ ಎಂದು ಶಂಕಿಸಲಾದ ಕೆಂಪು ಕಾರು ವಶ
Photo Credit : PTI
ಚಂಡಿಗಢ, ನ. 12: ದಿಲ್ಲಿ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ನಂಟು ಹೊಂದಿದೆ ಎಂದು ಶಂಕಿಸಲಾದ ಕೆಂಪು ಫೋರ್ಡ್ ಇಕೊ ಸ್ಪೋರ್ಟ್ಸ್ ಕಾರನ್ನು ಫರಿದಾಬಾದ್ ಜಿಲ್ಲೆಯ ಖಂಡವಾಲಿಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಇಕೊ ಸ್ಪೋರ್ಟ್ಸ್ ಕಾರನ್ನು ಪತ್ತೆ ಮಾಡಲಾಗಿದೆಯೇ ಎಂದು ಪ್ರಶ್ನಿಸಿದಾಗ ಫರಿದಾಬಾದ್ ನ ಪೊಲೀಸ್ ವಕ್ತಾರ ಫೋನ್ ಮೂಲಕ ದೃಢಪಡಿಸಿದ್ದಾರೆ. ‘‘ಹೌದು, ಅದು ಖಂಡವಾಲಿ ಗ್ರಾಮದಲ್ಲಿ ಪತ್ತೆಯಾಗಿದೆ’’ ಎಂದು ಅವರು ಹೇಳಿದ್ದಾರೆ.
ಇದಕ್ಕಿಂತ ಮುನ್ನ ಕೆಂಪು ಫೋರ್ಡ್ ಇಕೊ ಸ್ಪೋರ್ಟ್ಸ್ ಕಾರನ್ನು ಪತ್ತೆ ಹಚ್ಚಲು ದಿಲ್ಲಿಯ ಎಲ್ಲಾ ಪೊಲೀಸ್ ಠಾಣೆ, ಹೊರ ಠಾಣೆ, ಗಡಿ ತಪಾಸಣಾ ಕೇಂದ್ರಗಳಲ್ಲಿ ದಿಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು
ಸ್ಫೋಟದಲ್ಲಿ ಬಳಸಲಾಗಿರುವ ಹುಂಡೈ ಐ 20 ಕಾರಿನೊಂದಿಗೆ ನಂಟು ಹೊಂದಿರುವ ಇತರ ಶಂಕಿತರು ಮತ್ತೊಂದು ಕೆಂಪು ಬಣ್ಣದ ಕಾರನ್ನು ಹೊಂದಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾದ ಬಳಿಕ ಈ ಮುನ್ನೆಚ್ಚರಿಕೆ ನೀಡಲಾಗಿತ್ತು.
ಕಾರನ್ನು ಪತ್ತೆ ಹಚ್ಚಲು ದಿಲ್ಲಿ ಪೊಲೀಸರ ಕನಿಷ್ಠ ಐದು ತಂಡಗಳನ್ನು ನಿಯೋಜಿಸಲಾಗಿತ್ತು. ನೆರೆಯ ಉತ್ತರಪ್ರದೇಶ ಹಾಗೂ ಹರಿಯಾಣ ಪೊಲೀಸರನ್ನು ಮುನ್ನೆಚ್ಚರಿಕೆ ವಹಿಸಲು ಹಾಗೂ ಹುಡುಕಾಟದಲ್ಲಿ ನೆರವು ನೀಡಲು ಸೂಚಿಸಲಾಗಿತ್ತು.