ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ | ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೋಷಾರೋಪ ದಾಖಲಿಸಿದ ದಿಲ್ಲಿ ನ್ಯಾಯಾಲಯ
Update: 2024-05-10 17:47 IST
ಬ್ರಿಜ್ ಭೂಷಣ್ ಸಿಂಗ್ | Photo: PTI
ಹೊಸದಿಲ್ಲಿ : ಐವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದಿಲ್ಲಿ ನ್ಯಾಯಾಲಯ ದೋಷಾರೋಪ ದಾಖಲಿಸಿದೆ. ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿದೆ.
ಬ್ರಿಜ್ ಭೂಷಣ್ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಸಾಕ್ಷ್ಯಗಳನ್ನು ನ್ಯಾಯಾಲಯ ಕಂಡುಕೊಂಡಿದೆ ಎಂದು ANI ಸುದ್ದಿ ಸಂಸ್ಥ ವರದಿ ಮಾಡಿದೆ.
"ಪ್ರತಿಯೊಬ್ಬ ಸಂತ್ರಸ್ತೆಗೆ ಸಂಬಂಧಿಸಿದಂತೆ ಐಪಿಸಿ 354 ಮತ್ತು 354A ಅಡಿಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ಆರೋಪಗಳನ್ನು ದಾಖಲಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.
ಆರನೇ ಕುಸ್ತಿಪಟು ಮಾಡಿದ ಆರೋಪಗಳಿಂದ ಬ್ರಿಜ್ ಭೂಷಣ್ ಅವರನ್ನು ಖುಲಾಸೆಗೊಳಿಸಿದೆ ಎಂದು ನ್ಯಾಯಾಲಯ ಹೇಳಿದೆ.