×
Ad

ದಿಲ್ಲಿ ವಿಧಾನಸಭಾ ಚುನಾವಣೆ | ನ್ಯಾಯಾಲಯ ನಮ್ಮನ್ನು ಬಿಡುಗಡೆ ಮಾಡಿದೆ; ನಾವು ಪ್ರಾಮಾಣಿಕರೇ ಎಂದು ಜನರು ನಿರ್ಧರಿಸಬೇಕು: ಆಪ್‌ ನಾಯಕ ಮನೀಶ್ ಸಿಸೋಡಿಯಾ

Update: 2025-02-05 10:53 IST

Photo : x/@ANI

ಹೊಸದಿಲ್ಲಿ : ನ್ಯಾಯಾಲಯ ನಮ್ಮನ್ನು ಬಿಡುಗಡೆ ಮಾಡಿದೆ. ನಾವು ಪ್ರಾಮಾಣಿಕರೇ ಎಂದು ಜನರು ನಿರ್ಧರಿಸಬೇಕು ಎಂದು ಜಂಗ್‌ಪುರ ಕ್ಷೇತ್ರದ ಎಎಪಿ ಅಭ್ಯರ್ಥಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ದಿಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಬುಧವಾರ ನಡೆಯುತ್ತಿರುವ ಚುನಾವಣೆಯಲ್ಲಿ ಮತಚಲಾಯಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

"ಇಲ್ಲಿಯವರೆಗೆ ವಾತಾವರಣ ನಮ್ಮ ಪರ ಇದೆ. ಜನರು ಬುದ್ಧಿವಂತರು. ಅವರು ನಿಂದನೀಯ ಭಾಷೆಗಳಿಗೆ ಅಥವಾ ಹಣಕ್ಕೆ ಮತ ಚಲಾಯಿಸುವುದಿಲ್ಲ. ಜನರು ಮತ ಚಲಾಯಿಸಲು ಹೋದಾಗ, ಅವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೆಲಸ ಮಾಡುವ ಪಕ್ಷವನ್ನು ಪರಿಗಣಿಸುತ್ತಾರೆ. ಬಿಜೆಪಿ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ದಾಖಲಿಸಿದೆ ಎಂದು ಜನರಿಗೆ ಖಚಿತವಾಗಿದೆ. 6 ತಿಂಗಳ ಹಿಂದೆ ಜೈಲಿನಿಂದ ಹೊರಬಂದಾಗ ಬಳಿಕ ನಾನು ಮತ್ತು ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದೇವೆ. ನ್ಯಾಯಾಲಯ ನಮ್ಮನ್ನು ಬಿಡುಗಡೆ ಮಾಡಿದೆ. ಆದರೆ ದಿಲ್ಲಿಯ ಜನರು ಮನೀಶ್ ಸಿಸೋಡಿಯಾ ಪ್ರಾಮಾಣಿಕರೇ ಅಥವಾ ಅಲ್ಲವೇ ಎಂದು ನಿರ್ಧರಿಸಬೇಕು..." ಎಂದು ಮನೀಶ್ ಸಿದೋಡಿಯಾ ಅಭಿಪ್ರಾಯಪಟ್ಟಿದ್ದಾರೆ.

ಜಂಗ್‌ಪುರ ಕ್ಷೇತ್ರದ ಅಭ್ಯರ್ಥಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಮತ ಚಲಾಯಿಸಿದ ಬಳಿಕ ತಮ್ಮ ಕ್ಷೇತ್ರದ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News