×
Ad

ಟಿಕೆಟ್ ವಂಚಿತ ಬಿಜೆಪಿ ಮಾಜಿ ಸಚಿವ ಬಿಎಸ್ಪಿಗೆ ಸೇರ್ಪಡೆ

Update: 2023-10-24 08:12 IST

Photo: wikipedia.org/wiki/Rustam_Singh 

ಭೋಪಾಲ್: ಮಧ್ಯಪ್ರದೇಶದ ಮಾಜಿ ಸಚಿವ ರುಸ್ತಮ್ ಸಿಂಗ್, ಸೋಮವಾರ ಎರಡು ಸಾಲಿನ ರಾಜೀನಾಮೆ ಪತ್ರದ ಮೂಲಕ ಬಿಜೆಪಿ ಜತೆಗಿನ ಹಲವು ವರ್ಷಗಳ ನಂಟು ಕಡಿದುಕೊಂಡಿದ್ದಾರೆ. ಎರಡು ಬಾರಿ ಇವರು ಪ್ರತಿನಿಧಿಸಿದ್ದ ಮೊರೇನಾ ಕ್ಷೇತ್ರದಿಂದ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಸಿಂಗ್ ಈ ಕ್ರಮ ಕೈಗೊಂಡಿದ್ದಾರೆ.

ರುಸ್ತಮ್ ಸಿಂಗ್ ಅವರ ರಾಜೀನಾಮೆ ಬಗ್ಗೆ ಪ್ರಶ್ನಿಸಿದಾಗ ಪಕ್ಷದ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ, "ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಬಿಜೆಪಿ ಅವರಿಗೆ ದೊಡ್ಡ ಅವಕಾಶಗಳನ್ನು ನೀಡಿದೆ. ಇಷ್ಟಾಗಿಯೂ, ಒಬ್ಬ ವ್ಯಕ್ತಿ ತಾನು ಬೇರೆಡೆ ಅವಕಾಶ ಪಡೆಯಬಲ್ಲೆ ಎಂದು ಭಾವಿಸಿದರೆ ಅದು ಒಳ್ಳೆಯದು" ಎಂದು ಪ್ರತಿಕ್ರಿಯಿಸಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್ ಅವರ ಕ್ಷೇತ್ರದಲ್ಲಿ ಜ್ಯೋತಿರಾದಿತ್ಯ ಸಿಂಗ್ ಜತೆ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿದ್ದ ಮಾಜಿ ಕಾಂಗ್ರೆಸ್ ಮುಖಂಡ ರಘುರಾಜ ಸಿಂಗ್ ಕನಸಾನ ಅವರನ್ನು ಕಣಕ್ಕೆ ಇಳಿಸಿದೆ. ಕನಸಾನ 2018ರಲ್ಲಿ ರುಸ್ತಮ್ ಸಿಂಗ್ ಅವರನ್ನು ಸೋಲಿಸಿದ್ದರು. ಆದರೆ 2020ರ ನವೆಂಬರ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಕೇಶ್ ಮವೈ ವಿರುದ್ಧ ಸೋಲು ಅನುಭವಿಸಿದ್ದರು.

ಪಕ್ಷಕ್ಕೆ ಹೊಸದಾಗಿ ಬಂದ ವ್ಯಕ್ತಿಗೆ ಎರಡನೇ ಅವಕಾಶ ನೀಡಿದ ಹಿನ್ನೆಲೆಯಲ್ಲಿ ರುಸ್ತಮ್ ಸಿಂಗ್ ಅವರಿಗೆ ಟಿಕೆಟ್ ನೀಡದಿರುವುದು ಮಾಜಿ ಸಚಿವರನ್ನು ಕೆರಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News