×
Ad

ಆಂಧ್ರ ದೇವಳ ಹುಂಡಿಯಲ್ಲಿ 100 ಕೋಟಿ ರೂ. ಚೆಕ್‌, ಆದರೆ ಖಾತೆಯಲ್ಲಿದ್ದುದು ಕೇವಲ 17 ರೂ.!

Update: 2023-08-25 16:16 IST

Photo credit: indiatoday.in

ಹೈದರಾಬಾದ್: ಆಂಧ್ರ ಪ್ರದೇಶದ ಸಿಂಹಾಚಲಂ ಎಂಬಲ್ಲಿರುವ ಶ್ರೀ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಹುಂಡಿಯನ್ನು ಇತ್ತೀಚೆಗೆ ದೇವಳದ ಆಡಳಿತ ತೆರೆದಾಗ ಅದರಲ್ಲಿ ರೂ. 100 ಕೋಟಿ ಮೊತ್ತದ ಚೆಕ್‌ ಕಂಡು ಬಂದಿತ್ತು. ದೇವಳದ ಆಡಳಿತ ಈ ಚೆಕ್‌ ಹಿಡಿದುಕೊಂಡು ಬ್ಯಾಂಕಿಗೆ ಹೋದಾಗ ಆ ನಿರ್ದಿಷ್ಟ ಭಕ್ತನ ಬ್ಯಾಂಕ್‌ ಖಾತೆಯಲ್ಲಿದ್ದುದು ಕೇವಲ ರೂ 17 ಎಂದು ಬೆಳಕಿಗೆ ಬಂದಿತ್ತು. ಖಾತೆದಾರನ ಹೆಸರು ರಾಧಾಕೃಷ್ಣ ಎಂದು ಗುರುತಿಸಲಾಗಿದೆ.

ಈ ರೂ. 100 ಕೋಟಿ ಚೆಕ್‌ನ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಚೆಕ್‌ಗೆ ಬೊಡ್ಡಪಳ್ಳಿ ರಾಧಾಕೃಷ್ಣ ಎಂಬಾತನ ಸಹಿ ಇತ್ತು ಆದರೆ ದಿನಾಂಕ ಇರಲಿಲ್ಲ. ಈ ನಿರ್ದಿಷ್ಟ ವ್ಯಕ್ತಿಯ ಸಂಪರ್ಕ ವಿವರಗಳನ್ನು ದೇವಳದ ಅಧಿಕಾರಿಗಳು ಬ್ಯಾಂಕ್‌ ಬಳಿ ಕೇಳಿದ್ದಾರೆ. ಈ ಚೆಕ್‌ ಅನ್ನು ಹುಂಡಿಗೆ ಹಾಕಿದವರಿಗೆ ದುರುದ್ದೇಶವಿದ್ದುದು ಕಂಡುಬಂದರೆ ಆತನ ವಿರುದ್ಧ ಚೆಕ್‌ ಬೌನ್ಸ್‌ ಕೇಸ್‌ ದಾಖಲಿಸಲಾಗುವುದೆಂದು ದೇವಳದ ಆಡಳಿತ ಹೇಳಿದೆ.

ದೇವಸ್ಥಾನದ ಹುಂಡಿಯಲ್ಲಿ ಇಂತಹ ನಕಲಿ ಚೆಕ್‌ಗಳು ಇರುತ್ತವೆಯಾದರೂ ಇಷ್ಟೊಂದು ದೊಡ್ಡ ಮೊತ್ತ ಬರೆದಿರುವ ಚೆಕ್‌ ದೊರಕಿದ್ದು ಇದೇ ಮೊದಲು ಎಂದು ದೇವಳದ ಅಧಿಕಾರಿಗಳು ಹೇಳಿದ್ದಾರೆ.

ಹಳೆ ನೋಟುಗಳು, ಹರಿದ ನೋಟುಗಳು ಹಾಗೂ ಹರಿದ ಚೆಕ್‌ಗಳೂ ಹಲವೊಮ್ಮೆ ಹುಂಡಿಯಲ್ಲಿ ಇರುತ್ತದೆ ಎಂದು ಅವರು ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News