×
Ad

ದೂರದರ್ಶನದ ಕೃಷಿ ದರ್ಶನ ಲೈವ್ ಕಾರ್ಯಕ್ರಮದಲ್ಲಿ ಕುಸಿದು ಬಿದ್ದು ಮೃತಪಟ್ಟ ಕೃಷಿ ತಜ್ಞ

Update: 2024-01-13 12:11 IST

ಡಾ. ಅನಿ ಎಸ್‌ ದಾಸ್‌ (Photo: ndtv.com)

ತಿರುವನಂತಪುರಂ: ಇಲ್ಲಿನ ದೂರದರ್ಶನ ಸ್ಟುಡಿಯೋದಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಕೃಷಿ ತಜ್ಞರೊಬ್ಬರು ಸ್ಟುಡಿಯೋದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

ಕೇರಳ ಕೃಷಿ ವಿಶ್ವವಿದ್ಯಾಲಯದ ಯೋಜನಾ ವಿಭಾಗದ ನಿರ್ದೇಶಕರಾಗಿದ್ದ ಡಾ. ಅನಿ ಎಸ್‌ ದಾಸ್‌ (59) ಅವರು ನೇರ ದೂರದರ್ಶನದ ಕೃಷಿ ದರ್ಶನ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಂಜೆ 6.30ಕ್ಕೆ ಭಾಗವಹಿಸುತ್ತಿದ್ದಾಗ ಕುಸಿದು ಬಿದ್ದರು.

ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರ ಜೀವ ಉಳಿಸಲಾಗಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News