×
Ad

'ಪ್ರವಾಹದ ವರದಿಯಲ್ಲೂ ಸುಳ್ಳು': ನಗೆಪಾಟಲಿಗೀಡಾದ ಎಬಿಪಿ ನ್ಯೂಸ್ ಪತ್ರಕರ್ತ

ದಿಲ್ಲಿ ಪ್ರವಾಹದ ಬಗ್ಗೆ ವರದಿ ಮಾಡುತ್ತಿದ್ದ ಎಬಿಪಿ ನ್ಯೂಸ್ ನ ಅಭಿಷೇಕ್ ಉಪಾಧ್ಯಾಯ ಎಂಬವರು ನೀರಿನಲ್ಲಿ ಮುಳುಗಿಕೊಂಡೇ ಸಾರ್ವಜನಿಕರೊಬ್ಬರನ್ನು ಮಾತನಾಡಿದ್ದರು.

Update: 2023-07-15 22:16 IST

Photo: Twitter

ಹೊಸದಿಲ್ಲಿ: ದಿಲ್ಲಿ ಪ್ರವಾಹದ ವರದಿ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರನ್ನು ನೀರಿನಲ್ಲಿ ನಿಲ್ಲಿಸಿ, ತಾನೂ ಕೂಡ ನೀರಿನಲ್ಲಿ ಮುಳುಗಿ ವರದಿ ಮಾಡಿದ ಎಬಿಪಿ ನ್ಯೂಸ್ ಪತ್ರಕರ್ತರೊಬ್ಬರು ಇದೀಗ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಜೊತೆಗೆ ಗೋದಿ ಮೀಡಿಯಾಗಳ ಟಿಆರ್ ಪಿ ಹುಚ್ಚಿನ ಒಂದು ಉದಾಹರಣೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಹೇಳುತ್ತಿದ್ದಾರೆ.

ದಿಲ್ಲಿ ಪ್ರವಾಹದ ಬಗ್ಗೆ ವರದಿ ಮಾಡುತ್ತಿದ್ದ ಎಬಿಪಿ ನ್ಯೂಸ್ ನ ಅಭಿಷೇಕ್ ಉಪಾಧ್ಯಾಯ ಎಂಬವರು ನೀರಿನಲ್ಲಿ ಮುಳುಗಿಕೊಂಡೇ ಸಾರ್ವಜನಿಕರೊಬ್ಬರನ್ನು ಮಾತನಾಡಿದ್ದರು. ಚಾನೆಲ್ ಜೊತೆ ಮಾತನಾಡಿದ್ದ ಆ ವ್ಯಕ್ತಿ, ‘‘ನಾನಿಲ್ಲೇ ಕೆಲಸ ಮಾಡುತ್ತಿದ್ದೆ. ಇಲ್ಲೆಲ್ಲಾ ನೀರು ತುಂಬಿದೆ. ಕೆಲಸಗಳೆಲ್ಲವೂ ಬಂದ್ ಆಗಿದೆ. ನಿನ್ನೆಯ ಪರಿಸ್ಥಿತಿ ಇನ್ನೂ ಗಂಭೀರವಾಗಿತ್ತು, ನಿನ್ನೆ ತಲೆಯ ಮೇಲೆಯೂ ನೀರು ಬಂದಿತ್ತು ಎಂದು ಹೇಳುತ್ತಾರೆ. ಈ ಬಗ್ಗೆ ವರದಿ ಮಾಡುವ ಅಭಿಷೇಕ್ ಉಪಾಧ್ಯಾಯ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುತ್ತಾರೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊದ ಮತ್ತೊಂದು ಆಯಾಮದ ವಿಡಿಯೊ ಬಿಡುಗಡೆಯಾದ ಮೇಲೆ ಅಭಿಷೇಕ್ ಉಪಾಧ್ಯಾಯ ನಗೆಪಾಟಲಿಗೀಡಾಗಿದ್ದಾರೆ. ಅಭಿಷೇಕ್ ಉಪಾಧ್ಯಾಯ ವರದಿ ಮಾಡಿದ ಪ್ರದೇಶದಲ್ಲಿ ಒಂದು ಕಡೆಯಲ್ಲಿ ಮಾತ್ರ ನೀರು ನಿಂತಿದ್ದು ರಸ್ತೆಯಲ್ಲಿ ಜನರು ಓಡಾಡುವ ಪ್ರದೇಶಗಳಲ್ಲಿ ಪ್ರವಾಹದ ನೀರು ಇಲ್ಲದಿರುವುದು , ವಾಹನಗಳು ಸಂಚರಿಸುತ್ತಿರುವುದು ಕಾಣಿಸುತ್ತದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಐಎಎಸ್ ಅಧಿಕಾರಿ ಸೂರ್ಯಪ್ರತಾಪ್ ಸಿಂಗ್, ‘‘ರಸ್ತೆ ಮೇಲೆ ನೀರು ಬಂದೇ ಇಲ್ಲ ಎನ್ನುವುದು ಕಾಣಿಸುತ್ತದೆ. ಆದರೂ ಕೂಡ ತಮ್ಮ ಟಿಆರ್ ಪಿಗಾಗಿ ಎಬಿಪಿ ನ್ಯೂಸ್ ಒಬ್ಬ ಬಡವನನ್ನು ನೀರಿನೊಳಗೆ ನಿಲ್ಲಿಸಿ ಪ್ರಶ್ನೆಗಳನ್ನು ಕೇಳುತ್ತಿದೆ. ಇಂತಹ ಜೋಕರ್ ಪತ್ರಕರ್ತರು ಇಂದು ಸರ್ಕಾರದ ವಕ್ತಾರರಾಗಿದ್ದಾರೆ’’ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News