ಗೋವಾ | ದೇವಸ್ಥಾನದಲ್ಲಿ ಕಾಲ್ತುಳಿತ: ಕನಿಷ್ಠ 6 ಮಂದಿ ಮೃತ್ಯು , 60ಕ್ಕೂ ಹೆಚ್ಚು ಮಂದಿಗೆ ಗಾಯ
ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು x.com/TOIGoaNews
ಪಣಜಿ: ಗೋವಾದ ಬಿಚೋಲಿಮ್‌ನ ಶಿರ್ಗಾವೊ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ಲೈರೈ ಜಾತ್ರಾ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೃತರನ್ನು ಬಿಚೋಲಿಮ್‌ನ ಸಖಾಲಿ ನಿವಾಸಿ ಸೂರ್ಯ ಮಾಯೇಕರ್; ಕುಂಭಾರ್ಜುವಾದ ಪ್ರತಿಭಾ ಕಲಂಗುಟ್ಕರ್, ಥಿವಿಮ್‌ನ ಯಶ್ವಂತ್ ಕೆರ್ಕರ್, ಪಿಲಿಗಾವೊದ ಮಠವಾಡಾದ ಸಾಗರ್ ನಂದಾರ್ಗೆ, ಮತ್ತು ಥಿವಿಮ್‌ನ ಔಚಿತ್ ವಾಡಾದ ನಿವಾಸಿಗಳಾದ ಆದಿತ್ಯ ಕೌತಂಕರ್ ಮತ್ತು ತನುಜಾ ಕೌತಂಕರ್ ಎಂದು ಗುರುತಿಸಲಾಗಿದೆ.
ಹೆಚ್ಚಿನ ಜನ ಸಂದಣಿಯಿಂದಾಗಿ ನೂಕುನುಗ್ಗಲು ಉಂಟಾದ ಕಾರಣ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದ್ದು, ತುರ್ತು ಸೇವೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.