×
Ad

ಬಂಗಾರ ಬಲು ದುಬಾರಿ| ಚಿನ್ನದ ಬೆಲೆಯಲ್ಲಿ ಮತ್ತೆ ಸಾರ್ವಕಾಲಿಕ ಏರಿಕೆ: ಇಂದಿನ ದರವೆಷ್ಟು?

Update: 2026-01-19 11:38 IST

ಸಾಂದರ್ಭಿಕ ಚಿತ್ರ 

ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ, ಟ್ರಂಪ್ ಆಡಳಿತದ ಗ್ರೀನ್ ಲ್ಯಾಂಡ್ ಸಂಬಂಧಿತ ನಿಲುವಿಗೆ ಯುರೋಪ್ ದೇಶಗಳ ವಿರೋಧದ ನಡುವೆ ತೆರಿಗೆ ಸಂಘರ್ಷ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.

ಭೌಗೋಳಿಕ-ರಾಜಕೀಯ ಸಂಘರ್ಷದ ನಡುವೆ ಹೂಡಿಕೆದಾರರು ಸುರಕ್ಷಿತ ಚಿನ್ನದ ಬೆಲೆ ಹೂಡಿಕೆ ಮಾಡುತ್ತಿರುವುದರಿಂದ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ, ಟ್ರಂಪ್ ಆಡಳಿತದ ಗ್ರೀನ್ ಲ್ಯಾಂಡ್ ಸಂಬಂಧಿತ ನಿಲುವಿಗೆ ಯುರೋಪ್ ದೇಶಗಳ ವಿರೋಧದ ನಡುವೆ ತೆರಿಗೆ ಸಂಘರ್ಷ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.

ಸೋಮವಾರ ಮಾರುಕಟ್ಟೆ ತೆರೆಯುತ್ತಲೇ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನಕ್ಕೆ ಬರೋಬ್ಬರಿ 1910 ರೂ. ಏರಿಕೆ ಕಂಡು, ದರ ಗರಿಷ್ಠ ಮಟ್ಟಕ್ಕೇರಿದೆ. ಇದೀಗ ಚಿನ್ನದ ದರ ಸಾರ್ವಕಾಲಿಕ ಏರಿಕೆಯಾಗಿ 1,45,690 ರೂ.ಗೆ ತಲುಪಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಸೋಮವಾರ ಜನವರಿ 19ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,569 (+191) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,355 (+175) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,927 (+143) ರೂ. ಬೆಲೆಗೆ ತಲುಪಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?

24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ 14,569 ರೂ. ಆಗಿದ್ದು, ರವಿವಾರ 14,378 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ದಿಢೀರ್‌ ಪ್ರತೀ ಗ್ರಾಂ ಚಿನ್ನದ ಬೆಲೆ 191 ರೂ. ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,355 ರೂ. ಆಗಿದ್ದು, ನಿನ್ನೆ 13,180 ರೂ. ಇತ್ತು. ನಿನ್ನೆಗಿಂತ ಇಂದು 175 ರೂ. ಹೆಚ್ಚಳವಾಗಿದೆ. 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 10,927 ರೂ. ಆಗಿದ್ದು, ನಿನ್ನೆ 10,784 ರೂ. ಇತ್ತು. ನಿನ್ನೆಗಿಂತ ಇಂದು 143 ರೂ. ಹೆಚ್ಚಳವಾಗಿದೆ.

ಭಾರತದಲ್ಲಿ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ:

ಚೆನ್ನೈ: 24 ಕ್ಯಾರೆಟ್ 14,673 ರೂ., 22 ಕ್ಯಾರೆಟ್ 13,450 ರೂ., 18 ಕ್ಯಾರೆಟ್ 11,230 ರೂ.

ಮುಂಬೈ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ.

ದಿಲ್ಲಿ: 24 ಕ್ಯಾರೆಟ್ ರೂ14,584 ರೂ., 22 ಕ್ಯಾರೆಟ್ 13,370 ರೂ., 18 ಕ್ಯಾರೆಟ್ 10,942 ರೂ.

ಕೋಲ್ಕತ್ತಾ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ.

ಬೆಂಗಳೂರು: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ.

ಹೈದರಾಬಾದ್: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ.

ಕೇರಳ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,927 ರೂ.

ಪುಣೆ: 24 ಕ್ಯಾರೆಟ್ 14,569 ರೂ., 22 ಕ್ಯಾರೆಟ್13,355 ರೂ., 18 ಕ್ಯಾರೆಟ್ 10,927 ರೂ.

ವಡೋದರಾ: 24 ಕ್ಯಾರೆಟ್ 14,574 ರೂ., 22 ಕ್ಯಾರೆಟ್ 13,360 ರೂ., 18 ಕ್ಯಾರೆಟ್ 10,932 ರೂ.

ಅಹಮದಾಬಾದ್: 24 ಕ್ಯಾರೆಟ್ 14,574 ರೂ., 22 ಕ್ಯಾರೆಟ್13,360 ರೂ., 18 ಕ್ಯಾರೆಟ್ 10,932 ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News