×
Ad

ಮತ್ತೆ ಏರುಹಾದಿಯಲ್ಲಿ ಚಿನ್ನ: ಮಂಗಳೂರಿನಲ್ಲಿ ಇಂದಿನ ದರವೆಷ್ಟು?

Update: 2026-02-04 10:45 IST

ಸಾಂದರ್ಭಿಕ ಚಿತ್ರ (AI)


ಕಳೆದ ಶುಕ್ರವಾರದಿಂದ ಸತತ ಕುಸಿತದ ಹಾದಿಯಲ್ಲಿದ್ದ ಚಿನ್ನ ಇದೀಗ ಮತ್ತೆ ಏರುಹಾದಿಯಲ್ಲಿ ಸಾಗುತ್ತಿದೆ.

ಬುಧವಾರ ಚಿನ್ನದ ಬೆಲೆಗಳು ಶೇ 2.2ರಷ್ಟು ಏರಿಕೆಯಾಗಿದೆ. ಜನವರಿ 29 ಗುರುವಾರದಂದು 10 ಗ್ರಾಂಗೆ 1,83,000 ರೂ. ಗಳ ಸಾರ್ವಕಾಲಿಕ ಗರಿಷ್ಠ ಮಟ್ಟದ ಏರಿಕೆ ಕಂಡಿದ್ದ ಚಿನ್ನ ನಂತರ ಲಾಭ ಗಳಿಕೆಯ ಮಾರಾಟದ ನಡುವೆ ಸತತ ಕುಸಿತ ಕಂಡಿತ್ತು. ಇದೀಗ ಮತ್ತೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಫೆಬ್ರವರಿ 4ರಂದು ಭಾರತದಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರತಿ ಗ್ರಾಂಗೆ 15,394 ರೂ. ಇದೆ. ಆಭರಣ ಚಿನ್ನದ 22 ಕ್ಯಾರೆಟ್ ಬೆಲೆ ಪ್ರತಿ ಗ್ರಾಂಗೆ 14,111 ರೂ.ರಷ್ಟು ಇದೆ.

ಜಾಗತಿಕವಾಗಿ ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸುತ್ತಿರುವ ಕಾರಣದಿಂದ ಚಿನ್ನದ ಬೆಲೆ ಸ್ಥಿರವಾಗಿ ಏರುತ್ತಿದೆ. ಅಮೆರಿಕನ್ ಡಾಲರ್ ದುರ್ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸುತ್ತಿವೆ. ಚೀನಾ ಮತ್ತು ಭಾರತ ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿವೆ. ಏರಿಳಿತಗಳ ಹೊರತಾಗಿಯೂ ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಹೆಚ್ಚಾಗುತ್ತಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಬುಧವಾರ (ಫೆಬ್ರವರಿ 4ರಂದು) ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,053 (+ 660) ರೂ.ಗೆ ಏರಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,715 (+605) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,040 (+495) ರೂ. ಬೆಲೆಗೆ ತಲುಪಿದೆ.

ಬೆಳ್ಳಿಯ ಬೆಲೆಯಲ್ಲೂ ಏರಿಕೆ

ಬುಧವಾರ ಮಾರುಕಟ್ಟೆ ತೆರೆದ ತಕ್ಷಣ ಬೆಳ್ಳಿಯ ಬೆಲೆ ಏರಿಕೆ ಕಂಡಿದೆ. ಇಂದು ಗ್ರಾಂಗೆ 40 ರೂ.ನಷ್ಟು ಏರಿದ ಬೆಳ್ಳಿ ಕೆಜಿಗೆ 3,20,000 ಲಕ್ಷ ರೂ. ತಲುಪಿದೆ.

ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,068 (+660) ರೂ., 22 ಕ್ಯಾರೆಟ್ ಚಿನ್ನದ ದರ 14,730 (+605) ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,053 (+660) ರೂ., 22 ಕ್ಯಾರೆಟ್ ಚಿನ್ನದ ದರ 14,715 (+605) ರೂ.

ಅಹ್ಮದಾಬಾದ್‌: 24 ಕ್ಯಾರೆಟ್ ಚಿನ್ನದ ದರ 16,058 (+660) ರೂ., 22 ಕ್ಯಾರೆಟ್ ಚಿನ್ನದ ದರ 14,720 (+605) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,256 (+689) ರೂ., 22 ಕ್ಯಾರೆಟ್ ಚಿನ್ನದ ದರ 14,900 (+630) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,053 (+660) ರೂ., 22 ಕ್ಯಾರೆಟ್ ಚಿನ್ನದ ದರ 14,715 (+605) ರೂ.

ಹೈದರಾಬಾದ್‌: 24 ಕ್ಯಾರೆಟ್ ಚಿನ್ನದ ದರ 16,053 (+660) ರೂ., 22 ಕ್ಯಾರೆಟ್ ಚಿನ್ನದ ದರ 14,715 (+605) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 16,068 (+660) ರೂ., 22 ಕ್ಯಾರೆಟ್ ಚಿನ್ನದ ದರ 14,730 (+605) ರೂ.

ಭೋಪಾಲ್‌: 24 ಕ್ಯಾರೆಟ್ ಚಿನ್ನದ ದರ 16,058 (+660) ರೂ., 22 ಕ್ಯಾರೆಟ್ ಚಿನ್ನದ ದರ 14,720 (+605) ರೂ.

ಲಖನೌ: 24 ಕ್ಯಾರೆಟ್ ಚಿನ್ನದ ದರ 16,068 (+660) ರೂ., 22 ಕ್ಯಾರೆಟ್ ಚಿನ್ನದ ದರ 14,730 (+605) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,068 (+660) ರೂ., 22 ಕ್ಯಾರೆಟ್ ಚಿನ್ನದ ದರ 14,730 (+605) ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News