×
Ad

‘ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ’; ಸಂಸತ್ತಿನ ಹೊರಗಡೆ ಪೋಸ್ಟರ್ ಹಿಡಿದು ಅಮಾನತುಗೊಂಡ ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆ

Update: 2026-02-04 11:34 IST

ಹೊಸದಿಲ್ಲಿ, ಫೆ. 4: ಸಂಸತ್ ಭವನದ ಮೆಟ್ಟಿಲುಗಳ ಬಳಿ ‘ಪ್ರಧಾನಿಯು ರಾಜಿ ಮಾಡಿಕೊಂಡಿದ್ದಾರೆ’ ಎಂಬ ಬರಹವಿರುವ ಪೋಸ್ಟರ್‌ ಗಳನ್ನು ಪ್ರದರ್ಶಿಸಿ ಅಮಾನತುಗೊಂಡ ಕಾಂಗ್ರೆಸ್ ಸಂಸದರು ಬುಧವಾರ ಪ್ರತಿಭಟನೆ ನಡೆಸಿದರು.

ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದದ ಕುರಿತಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದೇ ಆರೋಪವನ್ನು ಮಾಡಿದ್ದರು.

ಸಂಸತ್ತಿನ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯರಾದ ಗುರ್ಜೀತ್ ಸಿಂಗ್ ಔಜ್ಲಾ, ಹಿಬಿ ಈಡನ್, ಡೀನ್ ಕುರಿಯಾಕೋಸ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಬಿ. ಮಾಣಿಕ್ಕಂ ಟ್ಯಾಗೋರ್, ಡಾ. ಪ್ರಶಾಂತ್ ಯದೋರಾವ್ ಪಡೋಲೆ, ಚಮಲಾ ಕಿರಣ್ ಕುಮಾರ್ ರೆಡ್ಡಿ ಹಾಗೂ ಎಸ್. ವೆಂಕಟೇಶನ್ ಅವರನ್ನು ನಿನ್ನೆ ಸ್ಪೀಕರ್‌ ಅಮಾನತುಗೊಳಿಸಿದ್ದರು.

ಇದೇ ವೇಳೆ, ರಾಹುಲ್ ಗಾಂಧಿ ಅವರು ಸದನದಲ್ಲಿ ಚೀನಾ ಸಂಬಂಧಿತ ವಿಷಯವನ್ನೂ ಪ್ರಸ್ತಾಪಿಸಿದ್ದರು. ಪ್ರತಿಭಟನೆ ವೇಳೆ ಸಂಸದರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News