×
Ad

ನಾಳೆಯಿಂದಲೇ ಮಧ್ಯಮ ವರ್ಗದವರು, ಯುವಕರು ಜಿಎಸ್‌ಟಿ ಕಡಿತದ ಲಾಭ ಪಡೆಯಲಿದ್ದಾರೆ : ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Update: 2025-09-21 17:08 IST

ಹೊಸದಿಲ್ಲಿ : ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳು ನಾಳೆಯಿಂದ ಜಾರಿಗೆ ಬರಲಿವೆ. ನಾಳೆಯಿಂದ ಮಧ್ಯಮ ವರ್ಗದವರು, ಯುವಕರು ಜಿಎಸ್‌ಟಿ ಕಡಿತದ ಲಾಭ ಪಡೆಯಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವರಾತ್ರಿ ಮುನ್ನಾದಿನ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಹೊಸ ಜಿಎಸ್‌ಟಿ ಸುಧಾರಣೆಗಳನ್ನು ಸ್ವಾಗತಿಸಿದ್ದಾರೆ.

ನವರಾತ್ರಿಯ ಮೊದಲ ದಿನದಂದು ಜಿಎಸ್‌ಟಿ ಉಳಿತಾಯ ಹಬ್ಬಆರಂಭವಾಗುತ್ತದೆ. 99% ವಸ್ತುಗಳು 5% ತೆರಿಗೆ ಸ್ಲ್ಯಾಬ್ ಅಡಿಯಲ್ಲಿವೆ. 2017ಕ್ಕಿಂತ ಮೊದಲು ಭಾರತವು ತೆರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿತ್ತು. ದಶಕಗಳಿಂದ ನಮ್ಮ ದೇಶದ ಜನರು ಮತ್ತು ನಮ್ಮ ದೇಶದ ವ್ಯಾಪಾರಿಗಳು ವಿವಿಧ ತೆರಿಗೆಗಳ ಜಾಲದಲ್ಲಿ ಸಿಲುಕಿಕೊಂಡಿದ್ದರು. ಜಿಎಸ್‌ಟಿ ಸುಧಾರಣೆಯಿಂದ ದಿನನಿತ್ಯದ ಅಗತ್ಯ ವಸ್ತುಗಳು, ಔಷಧಿಗಳು, ವಿಮೆ ಅಗ್ಗವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News