×
Ad

ಹಿಮಾಚಲ ಪ್ರದೇಶ: ಭಾರೀ ಮಳೆಗೆ 51 ಬಲಿ, 22 ಮಂದಿ ನಾಪತ್ತೆ

Update: 2025-07-02 21:08 IST

PC : PTI 

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕನಿಷ್ಠ 51 ಮಂದಿ ಮೃತಪಟ್ಟಿದ್ದಾರೆ. 22 ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯಾದ್ಯಂತ ಮಳೆಯಿಂದಾಗಿ ದಿಢೀರ್ ಪ್ರವಾಹಗಳು ಹುಟ್ಟಿಕೊಂಡಿವೆ ಮತ್ತು ಭೂಕುಸಿತಗಳು ಸಂಭವಿಸುತ್ತಿವೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ)ವು, ಜೂನ್ 20ರಿಂದ ಜುಲೈ 1ರವರೆಗಿನ ಮಳೆ ಹಾನಿ ಅಂದಾಜು ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಮಾನವ ಜೀವಗಳು, ಖಾಸಗಿ ಸೊತ್ತುಗಳು, ಜಾನುವಾರುಗಳು ಮತ್ತು ಸಾರ್ವಜನಿಕ ಆಸ್ತಿಗಳಿಗೆ ಭಾರೀ ಹಾನಿಯಾಗಿದೆ ಎಂದು ವರದಿ ಹೇಳಿದೆ.

‘‘ದಿಢೀರ್ ಪ್ರವಾಹ, ಭೂಕುಸಿತ, ಸಿಡಿಲು ಪ್ರಹಾರ ಮತ್ತು ರಸ್ತೆ ಅಪಘಾತ ಮುಂತಾದ ವಿವಿಧ ಕಾರಣಗಳಿಂದಾಗಿ ಈವರೆಗೆ ಒಟ್ಟು 51 ಸಾವುಗಳು ಸಂಭವಿಸಿವೆ. 22 ಮಂದಿ ನಾಪತ್ತೆಯಾಗಿದ್ದಾರೆ. ಮಂಡಿ ಜಿಲ್ಲೆಯಲ್ಲಿ ಗರಿಷ್ಠ ಸಾವು-ನೋವು ಸಂಭವಿಸಿದೆ. ಈ ಜಿಲ್ಲೆಯಲ್ಲಿ ದಿಢೀರ್ ಪ್ರವಾಹ ಮತ್ತು ಮೇಘ ಸ್ಫೋಟಗಳಿಂದಾಗಿ 10 ಮಂದಿ ಮೃತಪಟ್ಟಿದ್ದಾರೆ’’ ಎಂದು ಎಸ್‌ ಇ ಒ ಸಿ ತನ್ನ ವರದಿಯಲ್ಲಿ ತಿಳಿಸಿದೆ.

ಮಳೆಗಾಲ ಸಂಬಂಧಿ ಘಟನೆಗಳಲ್ಲಿ 103 ಜನರು ಗಾಯಗೊಂಡಿದ್ದಾರೆ ಎಂಬುದಾಗಿಯೂ ವರದಿ ತಿಳಿಸಿದೆ. 204 ಮನೆಗಳು, 84 ಅಂಗಡಿಗಳು, ದನದ ಕೊಟ್ಟಿಗೆಗಳು ಮತ್ತು ಕಾರ್ಮಿಕರ ಗುಡಿಸಲುಗಳಿಗೆ ಹಾನಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News