×
Ad

ನಿಮ್ಮ ಪುತ್ರ ಎಷ್ಟು ರನ್ ಗಳಿಸಿದ್ದಾರೆ: ಅಮಿತ್ ಶಾಗೆ ಉದಯನಿಧಿ ಸ್ಟಾಲಿನ್ ಪ್ರಶ್ನೆ

Update: 2023-07-30 13:01 IST

ಚೆನ್ನೈ: ಡಿಎಂಕೆಯನ್ನು ರಾಜವಂಶದ ಪಕ್ಷ ಎಂದು ಕರೆದಿದ್ದಕ್ಕಾಗಿ ತಮಿಳುನಾಡು ಕ್ರೀಡಾ ಸಚಿವ ಉದಯಾನಿಧಿ ಸ್ಟಾಲಿನ್ ಅವರು ಗೃಹ ಸಚಿವ ಅಮಿತ್ ಷಾ ಅವರನ್ನು ಟೀಕಿಸಿದ್ದಾರೆ. ಗೃಹ ಸಚಿವರ ಮಗ ಜಯ್ ಶಾ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿ (ಬಿಸಿಸಿಐ) ಆಯ್ಕೆ ಆಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅಮಿತ್ ಶಾ ಅವರು ಶುಕ್ರವಾರ ರಾಮೇಶ್ವರಂನಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರ ಪಾದಾಯಾತ್ರೆಗೆ ಚಾಲನೆ ನೀಡಿ, ವಂಶ ರಾಜಕೀಯದ ಕುರಿತು ಮಾತನಾಡಿದ್ದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಡಿಎಂಕೆ ಮಿತ್ರ ಪಕ್ಷಗಳು ರಾಜವಂಶದ ರಾಜಕಾರಣವನ್ನು ಉತ್ತೇಜಿಸುತ್ತಿವೆ ಎಂದು ಅವರು ಆರೋಪಿಸಿದ್ದರು ಹಾಗೂ ಡಿಎಂಕೆಯನ್ನು ರಾಜವಂಶದ ಪಕ್ಷ ಎಂದು ಕರೆದಿದ್ದರು.

ಚೆನ್ನೈನಲ್ಲಿ ಡಿಎಂಕೆ ಯೂತ್ ವಿಂಗ್ನ ಹೊಸ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಉದಯಾನಿಧಿ, "ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ನಾನು ಶಾಸಕನಾಗಿದ್ದೇನೆ. ಆ ನಂತರ ನನ್ನನ್ನು ಮಂತ್ರಿಯನ್ನಾಗಿ ಮಾಡಲಾಯಿತು'' ಎಂದು ಪ್ರತಿಪಾದಿಸಿದರು.

"ನಮ್ಮ ಪಕ್ಷದ ನಾಯಕರು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ನಾನು ಅಮಿತ್ ಶಾರನ್ನು ಕೇಳಲು ಬಯಸುತ್ತೇನೆ, ನಿಮ್ಮ ಮಗ ಬಿಸಿಸಿಐ ಕಾರ್ಯದರ್ಶಿ ಆಗಿದ್ದು ಹೇಗೆ?.  ಜಯ ಶಾ ಅವರು ಎಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ ಹಾಗೂ ಅವರು ಎಷ್ಟು ರನ್ ಗಳಿಸಿದ್ದಾರೆ?" ಎಂದು ಉತ್ತರಿಸುವಂತೆ ಉದಯಾನಿಧಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News