×
Ad

ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲೂ INDIA ಇದೆ: ವಿಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ

Update: 2023-07-25 13:49 IST

ಹೊಸದಿಲ್ಲಿ: ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲೂ INDIA ಇದೆ. ಪ್ರತಿಪಕ್ಷಗಳಿಗೆ ಯಾವುದೇ ಗುರಿ ಇಲ್ಲ. ಇಂತಹ ದಿಕ್ಕು ತೋಚದ ವಿಪಕ್ಷಗಳನ್ನು ನಾನು ಈ ತನಕ ನೋಡಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಈ ವಿಷಯ ಪ್ರಸ್ತಾವಿಸಿದರು.

ಈ ರೀತಿಯ ಗೊತ್ತುಗುರಿ ಇಲ್ಲದ ವಿಪಕ್ಷಗಳನ್ನು ನೋಡಿಯೇ ಇರಲಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಎಲ್ಲದರಲ್ಲೂ ಭಾರತ(INDIA) ಇದೆ. ಹಾಗೆಂದ ಮಾತ್ರಕ್ಕೆ ಭಾರತ ಎಂದರೆ ಎಲ್ಲವೂ ಅಲ್ಲ. ದೇಶದ ಹೆಸರನ್ನು ಬಳಸಿಕೊಂಡು ಜನತೆಯನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದಾಗಿ ಮಾಜಿ ಕೇಂದ್ರ ಸಚಿವ ರವಿ ಶಂಕರ ಪ್ರಸಾದ್ ತಿಳಿಸಿದ್ದಾರೆ.

ಕಳೆದ ವಾರ ಬೆಂಗಳೂರಿನಲ್ಲಿ ನಡೆದ 26 ಪಕ್ಷಗಳ ಸಭೆಯಲ್ಲಿ ಮೈತ್ರಿಕೂಟಕ್ಕೆ I-N-D-I-A ಹೆಸರನ್ನು ಅಂತಿಮಗೊಳಿಸಲಾಗಿದ್ದು, ‘ಇಂಡಿಯಾ ಜಿತೇಗ’ ಎಂದು ಅಡಿಬರಹ ನೀಡಲಾಗಿತ್ತು. INDIA ಎನ್ನುವುದು ಭಾರತೀಯ ರಾಷ್ಟ್ರೀಯ ಅಭಿವೃದ್ದಿ ಅಂತರ್ಗತ ಒಕ್ಕೂಟದ ಸಂಕ್ಷಿಪ್ತ ರೂಪವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News