ತುರ್ಕಿಯಾ ಏರ್ಲೈನ್ಸ್ ಜೊತೆಗೆ ವಿಮಾನದ ಗುತ್ತಿಗೆ ಒಪ್ಪಂದವನ್ನು ಕೊನೆಗೊಳಿಸುವಂತೆ ಇಂಡಿಗೋಗೆ ಸೂಚನೆ
Update: 2025-05-30 20:10 IST
PC : @IndianTechGuide
ತುರ್ಕಿಯಾ ಏರ್ಲೈನ್ಸ್ ಜೊತೆಗೆ ವಿಮಾನದ ಗುತ್ತಿಗೆ ಒಪ್ಪಂದವನ್ನು ಕೊನೆಗೊಳಿಸುವಂತೆ ಇಂಡಿಗೋ ಏರ್ಲೈನ್ಸ್ ಗೆ ಭಾರತ ಸರಕಾರ ಸೂಚನೆ ನೀಡಿದೆ.
ಇತ್ತೀಚಿಗಷ್ಟೇ ತುರ್ಕಿಯಾ ಮೂಲದ CELEBI ವಿರುದ್ಧ ಕ್ರಮ ಕೈಗೊಂಡ ಬಳಿಕ ಸರಕಾರ ಈ ಸೂಚನೆ ನೀಡಿದೆ.
ʼಆಪರೇಷನ್ ಸಿಂಧೂರ್ʼ ಸಮಯದಲ್ಲಿ ತುರ್ಕಿಯಾವು ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಭಾರತವು ವಿಮಾನ ನಿಲ್ದಾಣಗಳಲ್ಲಿ ಕಾರ್ಗೋ ಸೇವೆ ನೀಡುತ್ತಿದ್ದ ತುರ್ಕಿಯಾ ಮೂಲದ CELEBI ಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿತ್ತು.
ಅದರ ಮುಂದುವರಿದ ಭಾಗವಾಗಿ ತುರ್ಕಿಯಾ ಏರ್ಲೈನ್ಸ್ ಜೊತೆಗಿನ ವಿಮಾನ ಗುತ್ತಿಗೆ ಒಪ್ಪಂದವನ್ನು ಮೂರು ತಿಂಗಳೊಳಗೆ ಕೊನೆಗೊಳಿಸುವಂತೆ ಕೇಂದ್ರವು ಇಂಡಿಗೋಗೆ ಸೂಚಿಸಿದೆ.