×
Ad

ಮಾ.15ರಿಂದ ಇಸ್ರೊ ಸ್ಪಾಡೆಕ್ಸ್ ಪ್ರಯೋಗ ಮರು ಆರಂಭ: ಇಸ್ರೋ ಅಧ್ಯಕ್ಷ ನಾರಾಯಣನ್‌

Update: 2025-02-28 20:22 IST

 ವಿ. ನಾರಾಯಣನ್ | PTI 

ಹೊಸದಿಲ್ಲಿ, ಫೆ. 28: ‘ಚೇಸರ್ ಹಾಗೂ ಟಾರ್ಗೆಟ್’ ಉಪಗ್ರಹಗಳನ್ನು ಪ್ರತ್ಯೇಕಗೊಳಿಸುವ ಸ್ಪೇಡೆಕ್ಸ್ (ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್) ಅನ್ನು ಮಾರ್ಚ್ ಮಧ್ಯ ಭಾಗದಿಂದ ಮರು ಆರಂಭಿಸಲಾಗುವುದು ಎಂದು ಇಸ್ರೋ ತಿಳಿಸಿದೆ.

ಭವಿಷ್ಯದ ಯೋಜನೆಗಳಿಗಾಗಿ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳುವ ಪ್ರಯತ್ನ ಇದಾಗಿದೆ.

ಇಸ್ರೋ ಕಳೆದ ವರ್ಷ ಡಿಸೆಂಬರ್ 30ರಂದು ಸ್ಪಾಡೆಕ್ಸ್ ಮಿಷನ್ ಅನ್ನು ಆರಂಭಿಸಿತ್ತು. ಇದು ಬಾಹ್ಯಾಕಾಶದಲ್ಲಿ ಡಾಕಿಂಗ್ ಪ್ರಯೋಗವನ್ನು ನಿರ್ವಹಿಸುವ ಗುರಿ ಹೊಂದಿತ್ತು. ಈ ಮಿಷನ್ ಡಾಕಿಂಗ್ ಪ್ರಯೋಗಗಳನ್ನು ನಿರ್ವಹಿಸಲು ಎರಡು ಉಪಗ್ರಹಗಳಾದ ‘ಎಸ್‌ಡಿಎಕ್ಸ್‌01 ಹಾಗೂ ಎಸ್‌ಡಿಎಕ್ಸ್‌02’ವನ್ನು ಕಕ್ಷೆಗೆ ಸೇರಿಸಿತ್ತು.

ಹಲವು ಪ್ರಯತ್ನಗಳ ಬಳಿಕ ಇಸ್ರೊ ಜನವರಿ 16ರಂದು ಎರಡು ಉಪಗ್ರಹಗಳನ್ನು ಡಾಕಿಂಗ್ ಮಾಡುವುದರಲ್ಲಿ ಯಶಸ್ವಿಯಾಗಿತ್ತು ಎಂದು ಅದು ಹೇಳಿದೆ.

ಪ್ರಸಕ್ತ ಏಕೀಕೃತ ಉಪಗ್ರಹಗಳು ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿದೆ. ಆದುದರಿಂದ ನಾವು ವಿವಿಧ ಪ್ರಯೋಗಗಳನ್ನು ನಡೆಸಲು ಎರಡು ತಿಂಗಳಿಗೊಮ್ಮೆ 10ರಿಂದ 15 ದಿನಗಳ ಕಾಲಾವಕಾಶ ಪಡೆಯುತ್ತೇವೆ ಎಂದು ಇಸ್ರೋದ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.

ಅವರು ಇಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನದ ಕಾರ್ಯಕ್ರಮದ ನೇಪಥ್ಯದಲ್ಲಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News