×
Ad

ಗುಂಡಿನ ದಾಳಿ: ಪಾಟ್ನಾದಲ್ಲಿ ಜೆಡಿಯು ಮುಖಂಡನ ಹತ್ಯೆ

Update: 2024-04-25 07:44 IST

ನಿತೀಶ್‌ ಕುಮಾರ್‌ ಅವರೊಂದಿಗೆ ಸೌರಭ್‌ ಕುಮಾರ್‌ Photo: X/IndiaTodayFLASH

ಪಾಟ್ನಾ: ಬುಧವಾರ ತಡರಾತ್ರಿ ಬಿಹಾರ ರಾಜಧಾನಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳದ ಮುಖಂಡರೊಬ್ಬರು ಹತ್ಯೆಗೀಡಾಗಿದ್ದಾರೆ. ಸೌರಭ್ ಕುಮಾರ್ ಎಂಬ ಯುವ ಮುಖಂಡ ಪಾಟ್ನಾದಲ್ಲಿ ಸಮಾರಂಭ ಮುಗಿಸಿಕೊಂಡು ಬೈಕ್ ನಲ್ಲಿ ಬರುತ್ತಿದ್ದಾಗ ನಡೆದ ದಾಳಿಯಲ್ಲಿ ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ.

ಬೈಕ್ ನಲ್ಲಿ ಬಂದ ನಾಲ್ವರು ದಾಳಿಕೋರರು ಎರಡು ಬಾರಿ ಗುಂಡು ಹಾರಿಸಿದ್ದು, ಇದರಿಂದ ಸೌರಭ್ ಜೀವ ಕಳೆದುಕೊಂಡಿದ್ದಾರೆ. ಅವರ ಸಹಚರ ಮುನ್ ಮುನ್ ಕುಮಾರ್ ಅವರಿಗೆ ಮೂರು ಗುಂಡು ತಗುಲಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಸೌರಭ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ  ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಪುನ್ ಪುನ್ ಗೆ ಆಗಮಿಸಿ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಪಾಟ್ನಾ ಪೊಲೀಸ್ ವಿಶೇಷ ತಂಡ ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News