×
Ad

ಗೋ ಏರ್ ಸ್ವಾಧೀನಕ್ಕೆ ಆಸಕ್ತಿ ತೋರಿದ ಜೆಟ್‌ವಿಂಗ್ಸ್ ಏರ್‌ವೇಸ್

Update: 2023-10-12 21:07 IST

Photo : Facebook

ಹೊಸದಿಲ್ಲಿ: ಅಸ್ಸಾಂನ ಪ್ರಮುಖ ಉದ್ಯಮಿಗಳಾದ ಸಂಜೀವ್ ನರೇನ್ ಮತ್ತು ಅನುಪಮ್ ಶರ್ಮಾ ಒಡೆತನದ ಜೆಟ್‌ವಿಂಗ್ಸ್ ಏರ್‌ವೇಸ್, ಬಿಕ್ಕಟ್ಟಿನಲ್ಲಿರುವ ಗೋ ಫಸ್ಟ್‌ ಸ್ವಾಧೀನಕ್ಕೆ ಆಸಕ್ತಿ ವಹಿಸಿದೆ.

ತೀವ್ರವಾದ ಬಿಕ್ಕಟ್ಟಿನಿಂದ ನಿಂತಿರುವ ಗೋ ಫಸ್ಟ್ ಏರ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿಯನ್ನು ತೋರಿರುವುದಾಗಿ ಜೆಟ್‌ವಿಂಗ್ಸ್ ಏರ್‌ವೇಸ್ ಇಂದು ಹೇಳಿದೆ.

ಗುವಾಹಟಿಯಲ್ಲಿ ತನ್ನ ನೆಲೆಯನ್ನು ಹೊಂದಿರುವ ವಿಮಾನಯಾನ ಸಂಸ್ಥೆ ಇತ್ತೀಚೆಗೆ ನಿಗದಿತ ಪ್ರಯಾಣಿಕ ವಿಮಾನಯಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಪಡೆದುಕೊಂಡಿದೆ.

ಇದಲ್ಲದೆ, ಗುವಾಹಟಿಯಲ್ಲಿನ ತನ್ನ ನೆಲೆಯೊಂದಿಗೆ ದೇಶದಾದ್ಯಂತ ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲು ದೃಢವಾದ ಯೋಜನೆಯನ್ನು ಹೊಂದಿದೆ ಎಂದು ಜೆಟ್‌ವಿಂಗ್ಸ್ ಏರ್‌ ಲೈನ್ ಹೇಳಿದೆ.

ಎಂಜಿನ್ ಸಮಸ್ಯೆಗಳು ಮತ್ತು ಹಣಕಾಸಿನ ತೊಂದರೆಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಗೋ ಫರ್ಸ್ಟ್ ಮೇ 3, 2023ರಿಂದ ಹಾರಾಟವನ್ನು ನಿಲ್ಲಿಸಿತ್ತು. ಬಳಿಕ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗೆ ಹೋಯಿತು.

2021-22ನೇ ಹಣಕಾಸು ವರ್ಷದಲ್ಲಿ ಗೋ ಫಸ್ಟ್‌ನ ಒಟ್ಟು ಆದಾಯವು ₹ 4,183 ಕೋಟಿಗಳಷ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News