×
Ad

ಪುಸ್ತಕದ ಮುಖಪುಟದಲ್ಲಿ ಅರುಂಧತಿ ರಾಯ್ ಧೂಮಪಾನದ ಚಿತ್ರದ ವಿರುದ್ಧ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

Update: 2025-10-13 20:51 IST

Photo Credit : NDTV 

ಕೊಚ್ಚಿ,ಅ.13: ಅರುಂಧತಿ ರಾಯ್ ಅವರ ‘ಮದರ್ ಮೇರಿ ಕಮ್ಸ್ ಟು ಮಿ’ ಕೃತಿಯ ಮುಖಪುಟದಲ್ಲಿ ಲೇಖಕಿ ಬೀಡಿ ಸೇದುತ್ತಿರುವ ಚಿತ್ರದ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೇರಳ ಉಚ್ಚ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ.

ಪುಸ್ತಕದ ಮುಖಪುಟವು ಶಾಸನಬದ್ಧ ಆರೋಗ್ಯ ಎಚ್ಚರಿಕೆಯನ್ನು ಹೊಂದಿರದ ಮೂಲಕ ಕಾನೂನನ್ನು ಉಲ್ಲಂಘಿಸಿದೆ ಎಂದು ಪಿಐಎಲ್ ಪ್ರತಿಪಾದಿಸಿತ್ತಾದರೂ ಮುಖ್ಯ ನ್ಯಾಯಾಧೀಶ ನಿತಿನ ಜಾಮ್ದಾರ್ ಮತ್ತು ನ್ಯಾ.ಬಸಂತ ಬಾಲಾಜಿ ಅವರ ವಿಭಾಗೀಯ ಪೀಠವು,ವಾಸ್ತವದಲ್ಲಿ ಪ್ರಕಾಶಕರು ಪುಸ್ತಕದ ಹಿಂದಿನ ರಕ್ಷಾ ಪುಟದಲ್ಲಿ ಧೂಮ್ರಪಾನ ಹಕ್ಕು ನಿರಾಕರಣೆಯನ್ನು ಸೇರಿಸಿದ್ದಾರೆ ಎನ್ನುವುದನ್ನು ಬಹಿರಂಗಗೊಳಿಸುವಲ್ಲಿ ಅರ್ಜಿದಾರರು ವಿಫಲಗೊಂಡಿದ್ದಾರೆ ಎಂದು ಹೇಳಿತು.

ಇಂತಹ ವಿಷಯಗಳನ್ನು ನಿರ್ಣಯಿಸಲು ಹೈಕೋರ್ಟ್ ಸೂಕ್ತ ವೇದಿಕೆಯಲ್ಲ. ಏಕೆಂದರೆ ಕೊಟ್ಪಾ ಕಾಯ್ದೆ 2003ರಡಿ ರಚಿಸಲಾದ ತಜ್ಞರ ಸಮಿತಿಗಳು ಎಲ್ಲ ಸಂಬಂಧಿತ ಪಕ್ಷಗಳನ್ನು ಆಲಿಸಿದ ಬಳಿಕ ಅವುಗಳನ್ನು ನಿರ್ಧರಿಸಬೇಕಾಗುತ್ತದೆ ಎಂದೂ ಪೀಠವು ಹೇಳಿತು.

ಅರ್ಜಿ ಸಲ್ಲಿಕೆ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ನ್ಯಾಯಾಲಯವು,ಸಾರ್ವಜನಿಕ ಹಿತಾಸಕ್ತಿಗಿಂತ ಹೆಚ್ಚಾಗಿ ಪ್ರಚಾರದ ಹಿತಾಸಕ್ತಿಗಾಗಿ ಈ ಅರ್ಜಿಯನ್ನು ಸಲ್ಲಿಸಿರುವಂತೆ ಕಂಡು ಬರುತ್ತಿದೆ ಎಂದು ಟೀಕಿಸಿತು.

ವಕೀಲ ರಾಜಸಿಂಹನ್ ಅವರು ಕಳೆದ ತಿಂಗಳು ಸಲ್ಲಿಸಿದ್ದ ಅರ್ಜಿಯು ಪುಸ್ತಕದ ರಕ್ಷಾಪುಟದಲ್ಲಿ ಧೂಮ್ರಪಾನವನ್ನು ಬುದ್ಧಿಶಕ್ತಿ ಮತ್ತು ಸೃಜನಶೀಲತೆಯ ಸಂಕೇತ ಎಂದು ವೈಭವೀಕರಿಸಲಾಗಿದೆ ಎಂದು ಪ್ರತಿಪಾದಿಸಿತ್ತು.

ತನ್ನ ಆಕ್ಷೇಪಣೆ ಪುಸ್ತಕದ ವಿಷಯ ಅಥವಾ ಸಾಹಿತ್ಯಿಕ ಮೌಲ್ಯದ ಕುರಿತಲ್ಲ,ಬದಲಿಗೆ ರಕ್ಷಾಪುಟದಲ್ಲಿಯ ಚಿತ್ರಕ್ಕೆ ಎಂದು ಸ್ಪಷ್ಟಪಡಿಸಿದ ಅರ್ಜಿದಾರರು,ಈ ಚಿತ್ರವು ಪ್ರಭಾವಿತ ಓದುಗರನ್ನು ,ವಿಶೇಷವಾಗಿ ಯುವತಿಯರು ಮತ್ತು ಮಹಿಳೆಯರು ಧೂಮ್ರಪಾನವನ್ನು ಫ್ಯಾಷನ್ ಎಂದು ಪರಿಗಣಿಸುವಂತೆ ದಾರಿ ತಪ್ಪಿಸಬಹುದು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News