ಯುವಕನಿಂದ ಆನ್ ಲೈನ್ ನಲ್ಲಿ ಖಾಸಗಿ ಫೋಟೋಗಳ ಸೋರಿಕೆ; ಬಾಲಕಿ ಆತ್ಮಹತ್ಯೆ
Photo: PTI
ಕೌಶಂಬಿ(ಉತ್ತರ ಪ್ರದೇಶ): ತನ್ನ ನೆರೆಮನೆಯ ಯುವಕ ತನ್ನ ಖಾಸಗಿ ಫೋಟೋಗಳನ್ನು ಆನ್ ಲೈನ್ ನಲ್ಲಿ ಸೋರಿಕೆ ಮಾಡಿದ ನಂತರ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಗುರುವಾರ ಬಾಲಕಿ ತನ್ನ ಕೊಠಡಿಯಲ್ಲಿದ್ದಾಗ ಸೀರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವತಿಯ ಫೋಟೋಗಳನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಿದ್ದಕ್ಕಾಗಿ ಯುವಕನ ವಿರುದ್ಧ ದೂರು ನೀಡಲು ಬಾಲಕಿಯ ಕುಟುಂಬ ಸದಸ್ಯರು ಯುವಕನ ಮನೆಗೆ ಹೋಗಿದ್ದರು, ಆದರೆ ಅವರು ನಿಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹದ್ದೂರ್ ಸಿಂಗ್ ಮಾತನಾಡಿ, ಈ ಸಂಬಂಧ ಕುಟುಂಬವು ಈ ಹಿಂದೆ ಪೊಲೀಸರಿಗೆ ದೂರು ನೀಡಿತ್ತು ಎಂದಿದ್ದಾರೆ.
ಆರೋಪಿಯನ್ನು ಜೈ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ಬಾಲಕಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿಯ ಕುಟುಂಬಕ್ಕೆ ಜೈ ಸಿಂಗ್ ಕುಟುಂಬ ಸದಸ್ಯರು ನಿಂದಿಸಿದ್ದರು ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.