×
Ad

ಅವತ್ತು ಅವಮಾನ, ಇವತ್ತು ಸನ್ಮಾನ | ನಾಯಕ ಕೆ.ಎಲ್.ರಾಹುಲ್ ಗೆ ಭೋಜನಕೂಟ ಏರ್ಪಡಿಸಿದ ಲಕ್ನೊ ಮಾಲಕ ಸಂಜೀವ್ ಗೋಯೆಂಕಾ

Update: 2024-05-14 22:40 IST

ಸಂಜೀವ್ ಗೋಯೆಂಕಾ ,  ಕೆ.ಎಲ್.ರಾಹುಲ್ |  PC : X 

ಹೊಸದಿಲ್ಲಿ: ಲಕ್ನೊ ಸೂಪರ್ ಜಯಂಟ್ಸ್ ಮಾಲಕ ಸಂಜೀವ್ ಗೋಯೆಂಕಾ ಸೋಮವಾರ ರಾತ್ರಿ ನಾಯಕ ಕೆ.ಎಲ್.ರಾಹುಲ್ ಗೆ ಭೋಜನಕೂಟ ಏರ್ಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಭೋಜನಕೂಟದ ವೇಳೆ ಗೋಯೆಂಕಾ ಅವರು ರಾಹುಲ್ ರನ್ನು ಆಲಿಂಗಿಸಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳೆದ ವಾರ ಐಪಿಎಲ್ ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೊ ತಂಡ 10 ವಿಕೆಟ್ ಗಳಿಂದ ಹೀನಾಯವಾಗಿ ಸೋತ ನಂತರ ಗೋಯೆಂಕಾ ಅವರು ನಾಯಕ ರಾಹುಲ್ ವಿರುದ್ಧ ಕ್ಯಾಮರಾಗಳ ಮುಂದೆಯೇ ರೇಗಾಡಿದ್ದ ವೀಡಿಯೊ ಭಾರೀ ವೈರಲ್ ಆಗಿತ್ತು. ಲಕ್ನೊ ಮಾಲಕ ಹಾಗೂ ನಾಯಕನ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗೆ ಈ ಚಿತ್ರ ಅಂತ್ಯ ಹಾಡಿದೆ.

ಇಬ್ಬರು ಕ್ರಿಕೆಟ್ ಪ್ರೇಮಿಗಳ ನಡುವಿನ ಚರ್ಚೆಯು ನನಗೆ ಸಮಸ್ಯೆಯಾಗಿ ಕಂಡುಬಂದಿಲ್ಲ. ನಮಗೆ ಇದು ದೊಡ್ಡ ವಿಚಾರವಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕಿಂತ ಮೊದಲು ಲಕ್ನೊದ ಸಹಾಯಕ ಕೋಚ್ ಕ್ಲೂಸ್ನರ್ ಹೇಳಿದ್ದಾರೆ.

ಮೇ 8ರಂದು ಹೈದರಾಬಾದ್ನಲ್ಲಿ ಹೀನಾಯವಾಗಿ ಸೋತಿರುವ ಲಕ್ನೊ ತಂಡ ಪ್ಲೇ ಆಫ್ಗೆ ಅರ್ಹತೆ ಪಡೆಯುವ ವಿಶ್ವಾಸ ಹೆಚ್ಚಿಸಿಕೊಳ್ಳಲು ಇನ್ನುಳಿದ ಎರಡೂ ಲೀಗ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಲಕ್ನೊ ತಂಡ ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ 2 ಪಂದ್ಯಗಳನ್ನು ಆಡಲು ಬಾಕಿ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News