×
Ad

ಮಧ್ಯಪ್ರದೇಶ: ದಲಿತ ಸಮುದಾಯದ ಮಹಿಳಾ ಸರಪಂಚ್ ಮೇಲೆ ಶೂಗಳಿಂದ ಥಳಿತ; ಮೂವರ ಬಂಧನ

Update: 2023-07-19 11:54 IST

Photo: Twitter/@ambedkariteIND

ಶಿವಪುರಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಹಿಳಾ ಸರಪಂಚ್ ಅವರನ್ನು ಮೂವರು ವ್ಯಕ್ತಿಗಳು ಕೆಸರಿನಲ್ಲಿ ಎಳೆದೊಯ್ದು ಶೂಗಳಿಂದ ಥಳಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪಹಾಡಿ ಗ್ರಾಮ ಪಂಚಾಯಿತಿಯ ಸರಪಂಚ್ ನೀಡಿದ ದೂರಿನ ಆಧಾರದ ಮೇಲೆ, ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತೆಂಡುವಾ ಪೊಲೀಸ್ ಠಾಣೆ ಪ್ರಭಾರಿ ಮನೀಶ್ ಜಾಡನ್ ಹೇಳಿದರು.

ಆರೋಪಿಗಳ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ ಎಂದರು.

ರವಿವಾರ ಸಂಜೆ ನಡೆದ ಘಟನೆಯ ವೀಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

FIR ಪ್ರಕಾರ, ಸರಪಂಚ್ ನ ಹಿರಿಯ ಮಗ ಖರೈಗೆ ಹೋಗಿದ್ದನು, ಅಲ್ಲಿ ಒಬ್ಬ ಆರೋಪಿ ಅವನನ್ನು ತಡೆದು ಅವನ ತಾಯಿಯಿಂದ ಸಹಿ ಮಾಡಿದ ಕಾಗದವನ್ನು ಪಡೆಯಲು ಕೇಳಿದನು.

ಇದಕ್ಕೆ ಸರಪಂಚರ ಮಗ ನಿರಾಕರಿಸಿದಾಗ ಆರೋಪಿಗಳು ಥಳಿಸಿದ್ದಾರೆ ಎಂದು FIR ನಲ್ಲಿ ಹೇಳಲಾಗಿದೆ.

ನಂತರ ಸರಪಂಚ್ ತನ್ನ ಮಗನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ ಮೂವರು ವ್ಯಕ್ತಿಗಳು ಆಕೆಯನ್ನು ಅಡ್ಡಗಟ್ಟಿದ್ದಾರೆ. ಆರೋಪಿಗಳು ಮಹಿಳಾ ಸರಪಂಚ್ ರನ್ನು ಕೆಸರ ಮೇಲೆ ದೂಡಿ ಎಳೆದೊಯ್ದು ಶೂಗಳಿಂದ ಥಳಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News