×
Ad

ಮಹಾರಾಷ್ಟ್ರ: ಚಂದ್ರಪುರ ಜಿಲ್ಲೆಯಲ್ಲಿ 2023 ಜನವರಿಯಿಂದ ಜುಲೈ ವರೆಗೆ 73 ರೈತರು ಆತ್ಮಹತ್ಯೆ

Update: 2023-08-27 21:09 IST

ಮುಂಬೈ: ಕಳೆದ 13 ತಿಂಗಳು ಸೇರಿದಂತೆ ಈ ವರ್ಷ ಜನವರಿಯಿಂದ ಜುಲೈವರೆಗೆ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ 73ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಡಳಿತದ ದತ್ತಾಂಶ ತಿಳಿಸಿದೆ. ಕಳೆದ 5 ವರ್ಷಗಳಲ್ಲಿ 446 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸೇರಿದಂತೆ 2001ರಿಂದ 2023ರ ವರೆಗೆ ಜಿಲ್ಲೆಯಲ್ಲಿ 1,148 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದತ್ತಾಂಶ ತಿಳಿಸಿದೆ.

ಜಿಲ್ಲಾಡಳಿತದ ದತ್ತಾಂಶದ ಪ್ರಕಾರ 2001ರಿಂದ 2022ರ ನಡುವೆ ಆತ್ಮಹತ್ಯೆ ಮಾಡಿಕೊಂಡ 745 ರೈತರು ಸರಕಾರದ ಪರಿಹಾರಕ್ಕೆ ಅರ್ಹರಾಗಿದ್ದಾರೆ. 329 ರೈತರು ಅನರ್ಹರಾಗಿದ್ದಾರೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪರಿಷತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರನ್ನು ಒಳಗೊಂಡ ಸಮಿತಿ ಹೇಳಿದೆ.

ಮೃತಪಟ್ಟ ರೈತರ ಕುಟುಂಬದ ಸದಸ್ಯರಿಗೆ ಹಾಗೂ 2022 ಡಿಸೆಂಬರ್ನಿಂದ ಬಾಕಿ ಇರುವ 48 ಪ್ರಕರಣಗಳಲ್ಲಿ ಪರಿಹಾರ ನೀಡುವಂತೆ ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವ ಕಳುಹಿಸಿದೆ ಎಂದು ದತ್ತಾಂಶ ತಿಳಿಸಿದೆ. ‘‘ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಸದಸ್ಯರಿಗೆ 1 ಲಕ್ಷ ರೂ. ಪರಿಹಾರ ಒದಗಿಸುವ 2006ರಲ್ಲಿ ಪರಿಷ್ಕೃತಗೊಳಿಸಲಾದ ಮಾರ್ಗಸೂಚಿಗಳನ್ನು ನಾವು ಅನುಸರಿಸುತ್ತಿದ್ದೇವೆ’’ ಎಂದು ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ವರ್ಷ ಜೂನ್-ಜುಲೈಯಲ್ಲಿ ಸಂಭವಿಸಿದ ನೆರೆಯಿಂದ ಜಿಲ್ಲೆಯಲ್ಲಿ 64,379 ರೈತರಿಗೆ ಸೇರಿದ ಒಟ್ಟು 54,514,65 ಹೆಕ್ಟೇರ್ ಬೆಳೆಗಳು ನಾಶವಾಗಿವೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ ಜಿಲ್ಲೆಯಲ್ಲಿ ಸಂಭವಿಸಿದ ನೆರೆಯಿಂದಾಗಿ ಒಟ್ಟು 852 ಗ್ರಾಮಗಳು ಸಂತ್ರಸ್ತವಾಗಿವೆ. ಗೋಂಡಪಿಪರಿ ತಾಲೂಕಿನಲ್ಲಿ ಅತ್ಯಧಿಕ 12,571 ಹಕ್ಟೆರ್ ಬೆಳೆ ನಾಶವಾಗಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಬೆಳೆ ಹಾನಿಗೆ 44.63 ಕೋಟಿ ರೂ. ಪರಿಹಾರ ಪ್ರಸ್ತಾವವನ್ನು ಇಲಾಖೆ ಈಗಾಗಲೇ ಸರಕಾರಕ್ಕೆ ಕಳುಹಿಸಿದೆ ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News