×
Ad

ಮುಕೇಶ್ ಅಂಬಾನಿಗೆ ಜೀವ ಬೆದರಿಕೆ: ಇಬ್ಬರು ಯುವಕರ ಬಂಧನ

Update: 2023-11-04 17:08 IST

ಮುಕೇಶ್ ಅಂಬಾನಿ (PTI)

ಮುಂಬೈ: ರಿಲಾಯನ್ಸ್ ಇಂಡಸ್ಟ್ರಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಮುಕೇಶ್ ಅಂಬಾನಿ ಅವರಿಗೆ ಹಲವು ಜೀವ ಬೆದರಿಕೆಯ ಈಮೇಲ್ ಕಳುಹಿಸಿದ ಆರೋಪದಲ್ಲಿ ಇಬ್ಬರು ಯುವಕರನ್ನು ಮುಂಬೈ ಪೊಲೀಸ್‌ನ ಕ್ರೈಮ್ ಬ್ರಾಂಚ್ ಶನಿವಾರ ಬಂಧಿಸಿದೆ.

ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಮುಕೇಶ್ ಅಂಬಾನಿ ಅವರಿಗೆ ಬೆದರಿಕೆ ಇಮೇಲ್ ಕಳುಹಿಸಿದ ಆರೋಪದಲ್ಲಿ ಗಣೇಶ್ ರಮೇಶ್ ವಾನ್ರಪತಿ (19)ಯನ್ನು ತೆಲಂಗಾಣದ ವಾರಂಗಲ್‌ನಿಂದ ಹಾಗೂ ಶದಾಬ್ ಖಾನ್ (21)ನನ್ನು ಗುಜರಾತ್‌ನಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಕಳುಹಿಸಿದ ಬೆದರಿಕೆಯ ಇಮೇಲ್‌ನಲ್ಲಿ ಆರಂಭದಲ್ಲಿ 20 ಸಾವಿರ ರೂ. ಬೇಡಿಕೆ ಇರಿಸಿದ್ದರು. ಅನಂತರ ಈ ಮೊತ್ತವನ್ನು 400 ಕೋ.ರೂ. ವರೆಗೆ ಏರಿಸಿದ್ದರು.

ಈಮೇಲ್ ಕಳುಹಿಸಲು ಬಳಸಿರುವ ವಿಪಿಎನ್ ನೆಟ್‌ವರ್ಕ್ ಅನ್ನು ಆರಂಭದಲ್ಲಿ ಬೆಲ್ಜಿಯಂನಲ್ಲಿ ಪತ್ತೆ ಮಾಡಲಾಗಿತ್ತು.

ಗಣೇಶ್ ರಮೇಶ್ ವಾನ್ರಪತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನನ್ನು ನವೆಂಬರ್ 8ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News