ಮಿಝೋರಾಂ ಫಲಿತಾಂಶ: ಝೆಡ್‍ಪಿಎಂಗೆ ಮುನ್ನಡೆ; ಆಡಳಿತಾರೂಢ ಎಂಎನ್‍ಎಫ್‌ಗೆ ಹಿನ್ನಡೆ
Photo: ANI
ಹೊಸದಿಲ್ಲಿ: ನವೆಂಬರ್ 7ರಂದು ಮತದಾನ ನಡೆದ ಮಿಝೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆಡಳಿತಾರೂಢ ಎಂಎನ್‍ಎಫ್ ಆರಂಭಿಕ ಹಿನ್ನಡೆ ಗಳಿಸಿದೆ. 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಝೆಡ್‍ಪಿಎಂ ಅಗ್ರಸ್ಥಾನಿಯಾಗಿದೆ. 40 ಸದಸ್ಯಬಲದ ವಿಧಾನಸಭೆಯ ಸದಸ್ಯರ ಪ್ರಸಕ್ತ ಅಧಿಕಾರಾವಧಿ ಈ ತಿಂಗಳ 17ರಂದು ಮುಕ್ತಾಯವಾಗಲಿದೆ. ಕಳೆದ ಚುನಾವಣೆಯಲ್ಲಿ ಎಂಎನ್‍ಎಫ್ 40 ಸ್ಥಾನಗಳ ಪೈಕಿ 28ನ್ನು ಗೆದ್ದುಕೊಂಡಿತ್ತು.
1987ರ ಫೆಬ್ರವರಿ 20ರಂದು ಅಸ್ತಿತ್ವಕ್ಕೆ ಬಂದ ಮಿಜೋರಾಂ ರಾಜ್ಯವನ್ನು ಪ್ರಸ್ತುತ ಮಿಜೋ ನ್ಯಾಷನಲ್ ಫ್ರಂಟ್‍ನ ಝೋರಂಥಂಗಾ ಸರ್ಕಾರ ಆಳುತ್ತಿದೆ. 2008ರ ಚುನಾವಣೆಯಲ್ಲಿ 1998ರಿಂದ ಅಧಿಕಾರದಲ್ಲಿದ್ದ ಎಂಎನ್‍ಎಫ್ ಅನ್ನು ಸೋಲಿಸಿತ್ತು. ಐದು ವರ್ಷದ ಬಳಿಕ ಕಾಂಗ್ರೆಸ್ 34 ಸ್ಥಾನವನ್ನು ಗೆದ್ದರೆ ಎಂಎನ್‍ಎಫ್ ಕೇವಲ 5 ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಇತ್ತೀಚಿನ ವರದಿಗಳು ಬಂದಾಗ ಝೆಡ್‍ಪಿಎಂ 16, ಎಂಎನ್‍ಎಫ್ 11, ಕಾಂಗ್ರೆಸ್ 9, ಬಿಜೆಪಿ 2 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.