×
Ad

ದೆಹಲಿ ವಿವಿ ಶತಮಾನೋತ್ಸವಕ್ಕೆ ಮೋದಿ: ವಿದ್ಯಾರ್ಥಿಗಳು ಕಪ್ಪು ಬಟ್ಟೆ ಧರಿಸುವಂತಿಲ್ಲ!

Update: 2023-06-30 09:16 IST

ಫೋಟೋ: PTI

ಹೊಸದಿಲ್ಲಿ: ವಿದ್ಯಾರ್ಥಿಗಳು ಕಪ್ಪು ಬಟ್ಟೆ ಧರಿಸುವಂತಿಲ್ಲ; ಹಾಜರಾತಿ ಕಡ್ಡಾಯ ಮತ್ತು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಪಾಠ ಪ್ರವಚನ ಇಲ್ಲ- ದೆಹಲಿ ವಿಶ್ವವಿದ್ಯಾನಿಲಯದ ಶತಮಾನೋತ್ಸವ ನೇರ ಪ್ರಸಾರದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿವಿ ಆಡಳಿತ ನೀಡಿದ ಮಾರ್ಗಸೂಚಿಯ ಪ್ರಮುಖ ಅಂಶಗಳು ಇವು.

ಜೂನ್ 30ರಂದು ನಡೆಯುವ ದೆಹಲಿ ವಿವಿ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೋದಿ ಪಾಲ್ಗೊಳ್ಳುವರು. ಹಿಂದೂ ಕಾಲೇಜು, ಡಾ.ಭೀಮರಾವ್ ಅಂಬೇಡ್ಕರ್ ಕಾಲೇಜು ಮತ್ತು ಝಾಕಿರ್ ಹುಸೇಣ್ ದೆಹಲಿ ಕಾಲೇಜುಗಳು ಈಗಾಗಲೇ ಆದೇಶ ಹೊರಡಿಸಿ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿವೆ.

ಬುಧವಾರ ಈ ಸಂಬಂಧ ನೋಟಿಸ್ ನೀಡಲಾಗಿದ್ದು, ಹಿಂದೂ ಕಾಲೇಜಿನ ಶಿಕ್ಷಕ ಮೀನು ಶ್ರೀವಾಸ್ತವ ಏಳು ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ನೇರಪ್ರಸಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಐದು ಹಾಜರಿಗಳನ್ನು ನೀಡುವುದಾಗಿ ಆದೇಶ ವಿವರಿಸಿದೆ.

"ಈ ನೇರಪ್ರಸಾರದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ. ಕಾಲೇಜಿನ ಮೊದಲ ಅವಧಿ ಆರಂಭವಾಗುವ ಮುನ್ನ ಕಾಲೇಜಿನ ಆವರಣ ಪ್ರವೇಶಿಸಬೇಕು. ಅಂದರೆ ಬೆಳಿಗ್ಗೆ 8.50 ರಿಂದ 9.00 ಗಂಟೆಯ ನಡುವೆ ಕಾಲೇಜಿಗೆ ಆಗಮಿಸಿ ಸಂಭಾವ್ಯ ವಾಹನದಟ್ಟಣೆ ಅಥವಾ ಸಂಚಾರ ವ್ಯತ್ಯಯದಿಂದ ಪಾರಾಗಬೇಕು" ಎಂದು ಸ್ಪಷ್ಟಪಡಿಸಲಾಗಿದೆ.

"ಗುರುತಿನ ಪತ್ರವನ್ನು ಜತೆಗೆ ಇಟ್ಟುಕೊಳ್ಳುವುದು ಕಡ್ಡಾಯ. ಕಪ್ಪು ಬಟ್ಟೆಯನ್ನು ಆ ದಿನ ಧರಿಸುವಂತಿಲ್ಲ. ವಿದ್ಯಾರ್ಥಿ ಹಾಜರಾತಿ ಕಡ್ಡಾಯವಾಗಿದ್ದು, ಪಾಲ್ಗೊಳ್ಳುವಿಕೆಗೆ ಐದು ಹಾಜರಿ ನೀಡಲಾಗುತ್ತದೆ" ಆದರೆ ಕಾಲೇಜು ಆಡಳಿತ ಯಾವುದೇ ಇಂಥ ನಿರ್ದೇಶನ ನೀಡಿಲ್ಲ ಎಂದು ಪ್ರಾಚಾರ್ಯರಾದ ಅಂಜು ಶ್ರೀವಾಸ್ತವ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News