×
Ad

ಮುಂಬೈ ಬಸ್ ಅಪಘಾತ : ಬಸ್‌ ಗಳ ಚಾಲಕರು ಮದ್ಯ ಸೇವಿಸುತ್ತಿರುವ ವೀಡಿಯೊ ವೈರಲ್

Update: 2024-12-13 10:57 IST

Photo | PTI

ಮುಂಬೈ: ಬೃಹನ್ ಮುಂಬೈ ಸಾರಿಗೆ ಸಂಸ್ಥೆಯ ಅರೆಗುತ್ತಿಗೆ ಬಸ್‌ ಗಳ ಚಾಲಕರು ಮದ್ಯ ಖರೀದಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಡಿಸೆಂಬರ್ 9ರಂದು ಪಶ್ಚಿಮ ಕುರ್ಲಾ ರಸ್ತೆಯಲ್ಲಿ ಸಾರ್ವಜನಿಕ ಸಾರಿಗೆ ಸಂಸ್ಥೆಯ ಅರೆ ಗುತ್ತಿಗೆ ವಿದ್ಯುತ್ ಚಾಲಿತ ಬಸ್ ಅಡ್ಡಾದಿಡ್ಡಿಯಾಗಿ ಚಲಿಸಿ, ಏಳು ಮಂದಿಯನ್ನು ಬಲಿ ಪಡೆದ ನಂತರ ಈ ವೀಡಿಯೊ ವೈರಲ್ ಆಗಿದೆ.

ಈ ಪೈಕಿ ಒಂದು ವೀಡಿಯೊದಲ್ಲಿ, ಚಕ್ರದ ಮೇಲೆ ಕುಳಿತಿರುವ ಚಾಲಕನೊಬ್ಬ ಮದ್ಯ ಸೇವನೆ ಮಾಡುತ್ತಿದ್ದು, ಅದನ್ನು  ಅಧಿಕಾರಿಯೊಬ್ಬರು ಪ್ರಶ್ನಿಸುತ್ತಿರುವುದು ಸೆರೆಯಾಗಿದೆ. ಈ ವೀಡಿಯೊ ಮುಲುಂದ್ ಬಸ್ ಡಿಪೊಗೆ ಸೇರಿದ್ದಾಗಿದ್ದು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿರುವ ಘಟನೆ ಇದು ಎನ್ನಲಾಗಿದೆ.

"ಚಾಲಕನನ್ನು ತಕ್ಷಣವೇ ವಜಾಗೊಳಿಸಲಾಗಿದ್ದು, ರಸ್ತೆ ಬದಿಯಲ್ಲಿ ಬಸ್ ನಿಲ್ಲಿಸಿ, ಮದ್ಯ ಖರೀದಿಸಿದ ನಂತರ ಬಸ್‌ ಚಲಾಯಿಸಿಕೊಂಡು ಹೋಗುವ ಮೂರು ವೀಡಿಯೊಗಳನ್ನು ನಾವು ಸ್ವೀಕರಿಸಿದ್ದೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪೈಕಿ ಎರಡು ವೀಡಿಯೊಗಳು ಪೂರ್ವ ಬಾಂದ್ರಾ ಮತ್ತು ಅಂಧೇರಿಗೆ ಸೇರಿದ್ದು, ಮತ್ತೊಂದು ವೀಡಿಯೊ ಎಲ್ಲಿಯದ್ದು ಎಂದು    ಇನ್ನೂ ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

Mumbai BEST bus accident: Now videos go viral of wet-lease drivers buying alcohol

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News