×
Ad

ಮುಂಬೈ: ಜುಲೈನಲ್ಲಿ ಅತ್ಯಂತ ಹೆಚ್ಚು ಮಳೆ ದಾಖಲು

Update: 2023-07-27 10:37 IST

ಮುಂಬೈ: ಮುಂಬೈನಲ್ಲಿ ಬುಧವಾರ ದಿನವಿಡೀ ತೀವ್ರವಾದ ತುಂತುರು ಮಳೆ ಯಾಗಿದ್ದು, ಜುಲೈ ತಿಂಗಳಿನಲ್ಲಿ ಇದುವರೆಗೆ ದಾಖಲೆಯ 1557.8 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

IMD ಯ ಸಾಂತಾಕ್ರೂಝ್ ವೀಕ್ಷಣಾಲಯ (ಮುಂಬೈನ ಉಪನಗರಗಳ ಪ್ರತಿನಿಧಿ) 2020 ರಲ್ಲಿ ಜುಲೈ ಯಲ್ಲಿ 1,502 ಮಿಮೀ ಮಳೆಯನ್ನು ದಾಖಲಿಸಿತ್ತು.

ಜುಲೈ 1 ರಿಂದ ಜುಲೈ 26, 2023 ರ ಬೆಳಿಗ್ಗೆ (8.30 am) ಸಾಂತಾಕ್ರೂಝ್ ನಲ್ಲಿ (ವೀಕ್ಷಣಾಲಯ) 1,433 ಮಿಮೀ ದಾಖಲಾಗಿದೆ. ಆದ್ದರಿಂದ  ಜುಲೈ 26, 2023 ರಂದು ರಾತ್ರಿ 8.30 ಕ್ಕೆ ಜುಲೈನಲ್ಲಿ ದಾಖಲಾಗಿರುವ ಹೆಚ್ಚು ಮಳೆಯ ದಾಖಲೆಯನ್ನು ಮುರಿಯಲಾಗಿದೆ.  ಸಾಂತಾಕ್ರೂಝ್ ವೀಕ್ಷಣಾಲಯವು ಇಲ್ಲಿಯವರೆಗೆ ಒಟ್ಟು 1557.8 ಮಿಮೀ ದಾಖಲಿಸಿದೆ, ”ಎಂದು IMD ತಿಳಿಸಿದೆ.

ಮುಂಬೈನಲ್ಲಿ ದಿನವಿಡೀ ನಿರಂತರ ಭಾರೀ ಮಳೆ ಸುರಿಯಿತು, ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದವರೆಗೆ ಅನ್ವಯವಾಗುವಂತೆ 'ಆರೆಂಜ್' ಎಚ್ಚರಿಕೆಯನ್ನು ಕೆಂಪು ಎಚ್ಚರಿಕೆಯನ್ನಾಗಿ ಹವಾಮಾನ ಕಚೇರಿ ಬದಲಾಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News