ಗೋವಾ | ಮಾದಕ ವಸ್ತು ಜಾಲ ಬೇಧಿಸಿದ ಎನ್ಸಿಬಿ; ದಾವೂದ್ ನಿಕಟವರ್ತಿಯ ಬಂಧನ
ದಾನಿಶ್ ಚಿಕ್ನಾ | Photo : X \ ANI
ಮುಂಬೈ, ಅ. 29: ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಕಟವರ್ತಿ ಹಾಗೂ ಮಾದಕ ವಸ್ತು ಜಾಲದ ರೂವಾರಿ ದಾನಿಶ್ ಚಿಕ್ನಾನನ್ನು ಮಾದಕ ವಸ್ತು ನಿಯಂತ್ರಣ ಬ್ಯುರೊ (ಎನ್ಸಿಬಿ) ಗೋವಾದಿಂದ ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪೊಲೀಸರಿಂದ ತಲೆಮರೆಸಿಕೊಂಡಿದ್ದ ದಾನಿಶ್ ಚಿಕ್ನಾ ಆಲಿಯಾಸ್ ದಾನಿಶ್ ಮರ್ಚಂಟ್ ಭೂಗತ ಪಾತಕಿ ದಾವೂದ್ ತಂಡದೊಂದಿಗೆ ನಂಟು ಹೊಂದಿದ ಮಾದಕ ವಸ್ತು ಜಾಲವನ್ನು ನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕ ವಸ್ತು ನಿಯಂತ್ರಣ ಜಾಲ (ಎನ್ಸಿಬಿ) ದಾನಿಶ್ ಹಾಗೂ ಇತರ ಮೂವರನ್ನು ಬಂಧಿಸಿದೆ. ಅಲ್ಲದೆ, ಅವರ ವಶದಲ್ಲಿದ್ದ 1.341 ಕಿ.ಗ್ರಾಂ. ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದಲ್ಲಿ ಮುಂಬೈಯ ಎನ್ಸಿಬಿ ಸೆಪ್ಟಂಬರ್ 18ರಂದು ಪುಣೆಯಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿತ್ತು. ಆತನಿಂದ 502 ಗ್ರಾಂ. ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿತ್ತು.