×
Ad

ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

Update: 2024-06-04 07:27 IST
Live Updates - Page 12
2024-06-04 06:58 GMT

ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರಿಗೆ 98290 ಮತಗಳ ಮುನ್ನಡೆ

8ನೆ ಸುತ್ತಿನ ಎಣಿಕೆ ಮುಕ್ತಾಯಕ್ಕೆ ಕ್ಯಾ.ಬ್ರಿಜೇಶ್ ಚೌಟ 427547 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಆರ್. ಪದ್ಮರಾಜ್ 329257 ಮತಗಳನ್ನು ಗಳಿಸಿದ್ದಾರೆ. ಆ ಮೂಲಕ ಬ್ರಿಜೇಶ್ ಚೌಟ 98290 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

2024-06-04 06:57 GMT

ಹಾವೇರಿ ಲೋಕಸಭಾ ಕ್ಷೇತ್ರ: ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ 27054 ಮತಗಳ ಮುನ್ನಡೆ

ಬೊಮ್ಮಾಯಿ 402899 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ 375845

ಮತಗಳನ್ನು ಗಳಿಸಿದ್ದಾರೆ.

2024-06-04 06:56 GMT

ಮಂಡ್ಯದಲ್ಲಿ ಗೆಲುವಿನತ್ತ ದಾಪುಗಾಲಿಟ್ಟ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ 

2024-06-04 06:55 GMT

ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್‌ ವಿರುದ್ಧ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು : ಘೋಷಣೆ ಮಾತ್ರ ಬಾಕಿ

2024-06-04 06:55 GMT

ಧಾರವಾಡ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಗೆ 91734 ಮತಗಳ ಮುನ್ನಡೆ

ಪ್ರಹ್ಲಾದ ಜೋಶಿ- 590522 ಮತ

ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ-498788 ಮತ

2024-06-04 06:53 GMT

ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರಿಗೆ ಭರ್ಜರಿ ಮುನ್ನಡೆ

8ನೆ ಸುತ್ತಿನ ಎಣಿಕೆ ಮುಕ್ತಾಯಕ್ಕೆ ಕ್ಯಾ.ಬ್ರಿಜೇಶ್ ಚೌಟ 415827 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಆರ್. ಪದ್ಮರಾಜ್ 319903 ಮತಗಳನ್ನು ಗಳಿಸಿದ್ದಾರೆ. ಆ ಮೂಲಕ ಬ್ರಿಜೇಶ್ ಚೌಟ 95924 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

2024-06-04 06:52 GMT

ಭೀಮ್‌ ಆರ್ಮಿಯ ಚಂದ್ರಶೇಖರ್‌ ಆಝಾದ್‌ ಗೆ ಭಾರೀ ಮುನ್ನಡೆ

2024-06-04 06:51 GMT

ಕಲಬುರಗಿ ಲೋಕಸಭಾ ಕ್ಷೇತ್ರ: ಮಲ್ಲಿಕಾರ್ಜುನ ಖರ್ಗೆಯ ಅಳಿಯನಿಗೆ ಮುನ್ನಡೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ತವರೂರಾದ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬರುತ್ತಿದೆ. ಸದ್ಯ ಖರ್ಗೆಯವರ ಅಳಿಯ, ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ 6153 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.

ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಹಿನ್ನಡೆ ಅನುಭವಿಸುತ್ತಿದ್ದಾರೆ.

2024-06-04 06:50 GMT

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಶ್ರೇಯಸ್‌ ಪಟೇಲ್‌ ಗೆಲುವಿನತ್ತ

2024-06-04 06:48 GMT

ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಭಾರೀ ಹಿನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News