ಉತ್ತರ ಪ್ರದೇಶ | ಹಳಿ ತಪ್ಪಿದ ʼಜನ್ ಸಾಧಾರಣ್ ಎಕ್ಸ್‌ಪ್ರೆಸ್ʼ ರೈಲು
Update: 2025-08-01 19:11 IST
Photo | ndtv
ಲಕ್ನೋ: ಮುಝಫರ್‌ಪುರ-ಸಬರಮತಿ ಜನ್ ಸಾಧಾರಣ್ ಎಕ್ಸ್‌ಪ್ರೆಸ್ ರೈಲು ಭೌಪುರ ನಿಲ್ದಾಣದ ಬಳಿ ಹಳಿ ತಪ್ಪಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಸಂಜೆ 4:20ಕ್ಕೆ ಜನ್ ಸಾಧಾರಣ್ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿತಪ್ಪಿವೆ. ಅದೃಷ್ಟವಶಾತ್, ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನ್ಪುರದಿಂದ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರೈಲು ಹೇಗೆ ಹಳಿತಪ್ಪಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.