×
Ad

ಪ್ರತಿಪಕ್ಷಗಳ ಗಮನ ಕುಟುಂಬವೇ ಹೊರತು ರಾಷ್ಟ್ರವಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Update: 2023-07-18 11:50 IST

ಹೊಸದಿಲ್ಲಿ: ಪ್ರತಿಪಕ್ಷಗಳ ಗಮನ ಕುಟುಂಬವೇ ಹೊರತು ರಾಷ್ಟ್ರವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

"ಪ್ರತಿಪಕ್ಷದವರಿಗೆ ಕುಟುಂಬವೇ ಮೊದಲು, ರಾಷ್ಟ್ರ ಏನೂ ಅಲ್ಲ. ಭ್ರಷ್ಟಾಚಾರವೇ ಅವರ ಪ್ರೇರಣೆ. ದೊಡ್ಡ ಹಗರಣ, ಹೆಚ್ಚು ಭ್ರಷ್ಟ ವ್ಯಕ್ತಿಗೆ ಹೆಚ್ಚು ಗೌರವ" ಎಂದು ಅಂಡಮಾನ್ ಮತ್ತು ನಿಕೋಬಾರ್ ಪೋರ್ಟ್ ಬ್ಲೇರ್ ನಲ್ಲಿ ವೀರ್ ಸಾವರ್ಕರ್ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ಹೊಸ ಟರ್ಮಿನಲ್ ಅನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಹೇಳಿದರು.

"ಪ್ರತಿಪಕ್ಷಗಳ ಮಂತ್ರ -- ಕುಟುಂಬದಿಂದ ಹಾಗೂ ಕುಟುಂಬಕ್ಕಾಗಿ’’ ಎಂದು ಮೋದಿ ವ್ಯಂಗ್ಯವಾಡಿದರು.

ಸುಮಾರು 710 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಕಟ್ಟಡವು ದ್ವೀಪದ ಸಂಪರ್ಕವನ್ನು ಹೆಚ್ಚಿಸುತ್ತದೆ. ಸುಮಾರು 40,800 ಚದರ ಮೀಟರ್ ಒಟ್ಟು ನಿರ್ಮಿತ ಪ್ರದೇಶದೊಂದಿಗೆ, ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News