×
Ad

ಭಾರತದ ಜನರು ಇಸ್ರೇಲ್‌ ಜೊತೆಗೆ ದೃಢವಾಗಿ ನಿಂತಿದ್ದಾರೆ: ಪ್ರಧಾನಿ ಮೋದಿ

Update: 2023-10-10 16:26 IST

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (File Photo: PTI)

ಹೊಸದಿಲ್ಲಿ: “ಈ ಕಷ್ಟಕರ ಸನ್ನಿವೇಶದಲ್ಲಿ ಭಾರತದ ಜನರು ಇಸ್ರೇಲ್‌ ಜೊತೆಗೆ ದೃಢವಾಗಿ ನಿಂತಿದ್ದಾರೆ, ಭಾರತವು ಯಾವುದೇ ರೀತಿಯ ಉಗ್ರವಾದವನ್ನು ಬಲವಾಗಿ ಖಂಡಿಸುತ್ತದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಟ್ವಿಟರ್‌ ಪೋಸ್ಟ್‌ ಒಂದರಲ್ಲಿ ಹೇಳಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ತಮಗೆ ಕರೆ ಮಾಡಿ ಹಮಾಸ್‌ ದಾಳಿಯ ನಂತರ ತಮ್ಮ ದೇಶದ ಸ್ಥಿತಿಗತಿಯ ವಿವರ ನೀಡಿದರೆಂದೂ ಪ್ರಧಾನಿ ತಿಳಿಸಿದ್ದಾರೆ.

ಶನಿವಾರ ಇಸ್ರೇಲ್‌ ಮೇಲೆ ಹಮಾಸ್‌ ದಾಳಿಯ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಪ್ರಧಾನಿ “ಇಸ್ರೇಲ್ ಮೇಲೆ ನಡೆಯುತ್ತಿರುವ ಉಗ್ರ ದಾಳಿಯಿಂದ ತೀವ್ರ ಆಘಾತವಾಗಿದೆ. ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗಾಗಿ ನಾವು ಪ್ರಾರ್ಥಿಸುತ್ತೇವೆ. ಈ ಕಷ್ಟಕರ ಸ್ಥಿತಿಯಲ್ಲಿ ಇಸ್ರೇಲ್‌ ಜೊತೆಗೆ ನಾವಿದ್ದೇವೆ,” ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News