×
Ad

ಕವಯತ್ರಿ ಮಧುಮಿತಾ ಶುಕ್ಲಾ ಹತ್ಯೆ ಪ್ರಕರಣದ ದೋಷಿ ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ಶೀಘ್ರವೇ ಜೈಲಿನಿಂದ ಬಿಡುಗಡೆ

Update: 2023-08-25 13:03 IST

ಅಮರಮಣಿ ತ್ರಿಪಾಠಿ, Photo: PTI

ಹೊಸದಿಲ್ಲಿ: ಕವಯತ್ರಿ ಮಧುಮಿತಾ ಶುಕ್ಲಾ ಹತ್ಯೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ತ್ರಿಪಾಠಿ ಹಾಗೂ ತ್ರಿಪಾಠಿ ಪತ್ನಿ ಮಧುಮಣಿ ತ್ರಿಪಾಠಿ ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ರಾಜ್ಯ ಕಾರಾಗೃಹಗಳ ಆಡಳಿತ ಇಲಾಖೆಯಿಂದ ಮಾಜಿ ಸಚಿವ ಹಾಗೂ ಆತನ ಪತ್ನಿ ಬಿಡುಗಡೆ ಕುರಿತು ಆದೇಶ ಹೊರಡಿಸಲಾಗಿದೆ.

ಇನ್ನೊಂದು ಪ್ರಕರಣಕ್ಕೆ ಅಗತ್ಯವಿಲ್ಲದಿದ್ದರೆ, ತ್ರಿಪಾಠಿ ಹಾಗೂ ಆತನ ಪತ್ನಿಯನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಮರಮಣಿ ಹಾಗೂ ಅವರ ಪತ್ನಿ ಇಬ್ಬರನ್ನೂ ಅವರ ವಯಸ್ಸು, ಜೈಲಿನಲ್ಲಿ ಅನುಭವಿಸಿದ ಶಿಕ್ಷೆಯ ಅವಧಿ ಹಾಗೂ ಜೈಲಿನಲ್ಲಿ ಅವರ ಉತ್ತಮ ನಡವಳಿಕೆಯನ್ನು ಪರಿಗಣಿಸಿ ಬಿಡುಗಡೆ ಮಾಡಲಾಗುತ್ತದೆ.

ಕಳೆದ 20 ವರ್ಷಗಳಿಂದ ಉತ್ತರಪ್ರದೇಶದ ಗೋರಖ್ ಪುರದ ಜೈಲಿನಲ್ಲಿರುವ ದಂಪತಿಯನ್ನು ಬಾಂಡ್ ಸಲ್ಲಿಸಿದ ನಂತರ ಬಿಡುಗಡೆ ಮಾಡಲಾಗುತ್ತದೆ.

ಮೇ 9, 2003 ರಂದು ಲಕ್ನೋದಲ್ಲಿ ನಿಧನರಾದ ಕವಯತ್ರಿ ಮಧುಮಿತಾ ಶುಕ್ಲಾ ಅವರ ಹತ್ಯೆಗೆ ಸಂಬಂಧಿಸಿದಂತೆ ಡೆಹ್ರಾಡೂನ್ ನ ವಿಶೇಷ ನ್ಯಾಯಾಧೀಶರು/ಸೆಷನ್ಸ್ ನ್ಯಾಯಾಧೀಶರು ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.

ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ತನಿಖೆಯಲ್ಲಿ ಅಮರಮಣಿ ಹಾಗೂ ಅವರ ಪತ್ನಿ ಮಧುಮಣಿಯನ್ನು ತಪ್ಪಿತಸ್ಥರೆಂದು ಘೋಷಿಸಿ ನ್ಯಾಯಾಲಯಕ್ಕೆ ತನ್ನ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News