×
Ad

ಚುನಾವಣೋತ್ತರ ಸಮೀಕ್ಷೆ; ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ʼಜನ ಸುರಾಜ್ʼ ಗೆ ಎಷ್ಟು ಸ್ಥಾನ?

Update: 2025-11-11 19:35 IST

Photo: ndtv

ಪಾಟ್ನಾ: ಬಿಹಾರದ ಚುನಾವಣೆ ಮುಗಿದಿದ್ದು, ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಬಹುತೇಕ ಸಮೀಕ್ಷೆಗಳು ಎನ್ ಡಿ ಗೆ ಬಹುಮತ ಬರಲಿದೆ ಎಂದು ಅಂದಾಜಿಸಿದೆ. ಮಹಾಘಟಬಂಧನ್ ಮೈತ್ರಿಕೂಟವು 70 ರಿಂದ 110 ರ ಒಳಗೆ ಸ್ಥಾನ ಪಡೆಯಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ ಚುನಾವಣಾ ತಂತ್ರಜ್ಞ ಎಂದೇ ಕರೆಯಲ್ಪಡುವ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದೆ ಎಂದು ಸಮೀಕ್ಷೆಗಳು ಅಂದಾಜಿಸಿದೆ.

ದೈನಿಕ್ ಭಾಸ್ಕರ್, ಮ್ಯಾಟ್ರಿಝ್, ಪೀಪಲ್ಸ್ ಇನ್ಸೈಟ್, ಪೀಪಲ್ಸ್ ಪಲ್ಸ್, ಜೆವಿಸಿ ಪೋಲ್ಸ್, ಚಾಣಕ್ಯ ಸಮೀಕ್ಷೆಗಳು ಬಿಹಾರದಲ್ಲಿ ಪ್ರಶಾಂತ್ ಕಿಶೋರ್ ಅವರ ‘ಜನ್ ಸುರಾಜ್’ ಪಕ್ಷವು ಸೊನ್ನೆ ಸುತ್ತಬಹುದು ಅಥವಾ ಐದು ಸ್ಥಾನಗಳ ಒಳಗೆ ಒಂದು ಸ್ಥಾನ ಪಡೆಯಬಹುದು ಎಂದು ಅಂದಾಜಿಸಿದೆ. ಇದು ಚುನಾವಣಾ ತಂತ್ರಜ್ಞ ನಾಗಿ ರಾಜಕಾರಣಿಯಾಗಿರುವ ಪ್ರಶಾಂತ್ ಕಿಶೋರ್ ಅವರ ಹೊಸ ರಾಜಕೀಯ ಪ್ರಯೋಗವಾದ ‘ಜನ್ ಸುರಾಜ್’ ಪಕ್ಷಕ್ಕೆ ತೀವ್ರ ನಿರಾಶೆ ಉಂಟು ಮಾಡಬಹುದು ಎಂದು NDTV ವರದಿ ಮಾಡಿದೆ.

ಚುನಾವಣೆಗೆ ಮುನ್ನ ಕಿಶೋರ್ ತಮ್ಮ ಪಕ್ಷದ ಭವಿಷ್ಯ ಕುರಿತು “ಅರ್ಷ್ ಪೇ ಯಾ ಫರ್ಷ್ ಪೇ” (ಅಂದರೆ ಆಕಾಶದ ಎತ್ತರ ಅಥವಾ ನೆಲದ ತಳ) ಎಂದು ಹೇಳುತ್ತಿದ್ದರು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಪಕ್ಷವನ್ನು ನೇರವಾಗಿ ನೆಲಕ್ಕೇ ಇಳಿಸಿದೆ!

ಇಲ್ಲಿಯವರೆಗೆ ಹೊರಬಂದಿರುವ ಪ್ರಮುಖ ಸಮೀಕ್ಷೆಗಳು ಎಲ್ಲವೂ ಒಂದೇ ಸ್ವರದಲ್ಲಿ ಆಡಳಿತಾರೂಢ ಎನ್ಡಿಎಗೆ ಸ್ಪಷ್ಟ ಗೆಲುವು, ಮಹಾಘಟಬಂಧನ್ಗೆ ಹಿನ್ನಡೆ, ಮತ್ತು ಜನ್ ಸುರಾಜ್ ಪಕ್ಷಕ್ಕೆ ಶೂನ್ಯದಿಂದ ಐದು ಸ್ಥಾನಗಳಷ್ಟೇ ಸಿಗಬಹುದು ಎಂದು ಅಂದಾಜು ಮಾಡಿವೆ.

ಈ ಬಾರಿ ಬಿಹಾರದಲ್ಲಿ ಮತದಾನದ ಶೇಕಡಾವಾರು ದಾಖಲೆ ಮಟ್ಟದಲ್ಲಿದ್ದು, ಮೊದಲ ಹಂತದಲ್ಲಿ 64.67% ಮತ್ತು ಎರಡನೇ ಹಂತದಲ್ಲಿ 67.14% ಮತದಾನ ದಾಖಲಾಗಿದೆ. ಇದರಿಂದ ಆಡಳಿತ ವಿರೋಧಿ ಅಲೆಯ ನಿರೀಕ್ಷೆ ಇದ್ದರೂ, ಸಮೀಕ್ಷೆಗಳು ಅದಕ್ಕೆ ವಿರುದ್ಧದ ಚಿತ್ರಣ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News