×
Ad

ಕೇರಳ | ಹೆಲಿಪ್ಯಾಡ್ ಕಾಂಕ್ರಿಟ್‌ನಲ್ಲಿ ಹೂತುಹೋದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಚಕ್ರ

Update: 2025-10-22 11:52 IST

Screengrab: X/ANI

ಕೇರಳ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಂದಳಿದ ಹೆಲಿಕಾಪ್ಟರ್ ಚಕ್ರ ಹೆಲಿಪ್ಯಾಡ್‌ನ ಕಾಂಕ್ರಿಟ್‌ನಲ್ಲಿ ಹೂತುಹೋಗಿರುವ ಘಟನೆ ನಡೆದಿದೆ.

ಕೇರಳದ ಪ್ರಮದಂನಲ್ಲಿ ಹೊಸದಾಗಿ ಕಾಂಕ್ರಿಟ್‌ ಹಾಕಿದ ಹೆಲಿಪ್ಯಾಡ್‌ನಲ್ಲಿ ರಾಷ್ಟ್ರಪತಿಯವರ ಹೆಲಿಕಾಪ್ಟರ್ ಲ್ಯಾಂಡಿಂಗ್‌ ಬಳಿಕ ಘಟನೆ ನಡೆದಿದೆ. ಸ್ಥಳದಲ್ಲಿ ನಿಯೋಜಿತರಾಗಿದ್ದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೆಲಿಕಾಪ್ಟರ್ ಅನ್ನು ಮೇಲಕ್ಕೆ ತಳ್ಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಕೇರಳದ ಶಬರಿಮಲೆ ಬೆಟ್ಟದ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಮಂಗಳವಾರ ಸಂಜೆ ತಿರುವನಂತಪುರಂಗೆ ಆಗಮಿಸಿದ ಅವರನ್ನು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಜಾರ್ಜ್ ಕುರಿಯನ್ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ವಾಗತಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News