ಪಂಜಾಬ್ | ಅತ್ಯಾಚಾರ ಆರೋಪದಲ್ಲಿ ಬಂಧಿತ ಆಪ್ ಶಾಸಕ ಪೊಲೀಸರ ಮೇಲೆ ಗುಂಡು ಹಾರಿಸಿ ಕಸ್ಟಡಿಯಿಂದ ಪರಾರಿ
Update: 2025-09-02 11:57 IST
ಆಪ್ ಶಾಸಕ ಹರ್ಮೀತ್ ಸಿಂಗ್ ಪಠಾಣಮಾಜ್ರಾ (Screengrab:X)
ಪಟಿಯಾಲಾ: ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಬಂಧಿತ ಆಪ್ ಶಾಸಕ ಹರ್ಮೀತ್ ಸಿಂಗ್ ಧಿಲ್ಲೋನ್ ಪಠಾಣಮಾಜ್ರಾ ಮಂಗಳವಾರ ಕರ್ನಾಲ್‌ನಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸನೂರ್ ಕ್ಷೇತ್ರದ ಆಪ್ ಶಾಸಕ ಹರ್ಮೀತ್ ಪಠಾಣಮಜ್ರಾ ಅವರನ್ನು ಮಂಗಳವಾರ ಬೆಳಿಗ್ಗೆ ಕರ್ನಾಲ್‌ನಲ್ಲಿ ಬಂಧಿಸಲಾಯಿತು. ಅವರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಪಠಾಣಮಜ್ರಾ ಮತ್ತು ಅವರ ಸಹಾಯಕರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪಠಾಣಮಜ್ರಾ ವಿರುದ್ಧ ಮಹಿಳೆಯೋರ್ವರು ಅತ್ಯಾಚಾರ, ವಂಚನೆ ಆರೋಪ ಮಾಡಿದ್ದಾರೆ. ವಿಚ್ಛೇದನ ಪಡೆದಿರುವುದಾಗಿ ಸುಳ್ಳು ಹೇಳಿ ಹರ್ಮೀತ್ ಪಠಾಣಮಜ್ರಾ ನನ್ನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಆರೋಪಿಸಿ ಮಹಿಳೆ ಪ್ರಕರಣ ದಾಖಲಿಸಿದ್ದರು.