×
Ad

ಅಸ್ಸಾಂ | ಲಖೀಪುರ್ ಪರಿಹಾರ ಶಿಬಿರಗಳಲ್ಲಿರುವ ನೆರೆ ಸಂತ್ರಸ್ತರನ್ನು ಭೇಟಿಯಾದ ರಾಹುಲ್ ಗಾಂಧಿ

Update: 2024-07-08 12:17 IST

Photo:X/@INCIndia

ಲಖೀಪುರ್: ಮಣಿಪುರಕ್ಕೆ ಮೂರನೆಯ ಬಾರಿ ಭೇಟಿ ನೀಡಲು ಈಶಾನ್ಯ ರಾಜ್ಯಗಳನ್ನು ತಲುಪಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಈ ಭೇಟಿಯ ಮೊದಲ ದಿನವಾದ ಇಂದು ಲಖೀಪುರದ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಅಸ್ಸಾಂ ನೆರೆ ಸಂತ್ರಸ್ತರನ್ನು ಭೇಟಿಯಾಗಿ, ಅವರ ಯೋಗಕ್ಷೇಮ ವಿಚಾರಿಸಿದರು. ಇದಾದ ನಂತರ ಅವರು ಮಣಿಪುರಕ್ಕೆ ತೆರಳಲಿದ್ದಾರೆ.

ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡುವುದಕ್ಕೂ ಮುನ್ನ, ಜಿರಿಬಾಮ್ ಜಿಲ್ಲೆಯ ಮೈತೈ ಬಾಹುಳ್ಯ ಪ್ರದೇಶವಾದ ಗುಲರ್ತಾಲ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಮನ ಬಂದಂತೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳೂ ಪ್ರತಿ ಗುಂಡಿನ ದಾಳಿ ನಡೆಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಹುಲ್ ಗಾಂಧಿ ಭೇಟಿಗೂ ಮುನ್ನ, ಒಂದು ವರ್ಷದಿಂದ ನಾಜೂಕಿನ ಶಾಂತ ಸ್ಥಿತಿಯನ್ನು ಕಾಪಾಡಿಕೊಂಡು ಬಂದಿದ್ದ ಜಿರಿಬಾಮ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಹತ್ಯೆಯೊಂದಿಗೆ ಮತ್ತೆ ಸಂಘರ್ಷ ಸ್ಫೋಟಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News