×
Ad

ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಅಪ್ರಾಪ್ತೆ ಹತ್ಯೆ: ಆರೋಪಿ ಬಂಧನ

Update: 2024-10-21 07:34 IST

ತಿರುಪತಿ: ಹದಿನಾರು ವರ್ಷ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಬೆಂಕಿ ಹಚ್ಚಿ ಕೊಂದ ಪೈಶಾಚಿಕ ಕೃತ್ಯ ಕಡಪಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತೀವ್ರ ಸುಟ್ಟ ಗಾಯಗಳಿಂದ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಭಾನುವಾರ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾಳೆ.

ಆರೋಪಿ ಜಕ್ಕಲ ವಿಘ್ನೇಶ್ (20) ಎಂಬಾತನ ನ್ನು ಬಂಧಿಸಲಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ವಿಶೇಷ ನ್ಯಾಯಾಲಯದಲ್ಲಿ ಪೂರ್ಣಗೊಳಿಸಿ ಆರೋಪಿಗೆ ಮರಣ ದಂಡನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಪೊಲೀಸರಿಗೆ ಸೂಚಿಸಿದ್ದಾರೆ.

ಆರೋಪಿ ವಿಘ್ನೇಶ್ ಹಾಗೂ ಸಂತ್ರಸ್ತ ಯುವತಿ ಬಾಲ್ಯದಿಂದಲೇ ಸ್ನೇಹಿತರಾಗಿದ್ದರು. ಆದರೆ ಆರೋಪಿ ಈಕೆಯನ್ನು ಬಿಟ್ಟು ಬೇರೊಬ್ಬಳ ಜತೆ ವಿವಾಹವಾಗಿದ್ದ. ಆಕೆ ಇದೀಗ ಗರ್ಭಿಣಿ ಎಂದು ಎಸ್ಪಿ ಹರ್ಷವರ್ಧನ ರಾಜು ಹೇಳಿದ್ದಾರೆ. ಬಾಲ್ಯಸ್ನೇಹಿತೆಯಾಗಿದ್ದ ಯುವತಿ ತನ್ನನ್ನು ವಿವಾಹವಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಮುಗಿಸುವ ಸಂಚು ರೂಪಿಸಿ ಈ ಕೃತ್ಯಕ್ಕೆ ಮುಂದಾದ ಎಂದು ಅವರು ವಿವರಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News