×
Ad

ಪ್ರಚೋದನಕಾರಿ ವೀಡಿಯೊ ಶೇರ್ ಮಾಡುತ್ತಿರುವ ಬಲಪಂಥೀಯ ಚಾನೆಲ್ ಗಳು: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಡಿಜಿಪಿ

Update: 2023-08-06 21:44 IST

ಹೊಸದಿಲ್ಲಿ: ಮೇವತ್ (ನೂಹ್)ನಿಂದ ಹಿಂದೂ ಮಹಿಳೆಯರನ್ನು ಅಪಹರಿಸಲಾಗಿದೆ ಹಾಗೂ ಕಿರುಕುಳ ನೀಡಲಾಗಿದೆ ಎಂಬ ಯುಟ್ಯೂಬ್ ಚಾನಲ್ ಗಳ ದೃಢೀಕರಣಗೊಳ್ಳದ ಪ್ರತಿಪಾದನೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಬಲಪಂಥೀಯ ಚಾನೆಲ್ ಗಳು ಶೇರ್ ಮಾಡುವ ಮೂಲಕ ಕೋಮು ಗಲಭೆಯ ಬೆಂಕಿಗೆ ತುಪ್ಪ ಸುರಿಯುತ್ತಿವೆ ಎಂದು ಆಲ್ಟ್ ನ್ಯೂಸ್ ಪ್ರತಿಪಾದಿಸಿದೆ.

ಬಲಪಂಥೀಯ ಚಾನೆಲ್ ಗಳು ಶೇರ್ ಮಾಡಿದ ವೀಡಿಯೊದಲ್ಲಿರುವ ಪ್ರತಿಪಾದನೆಯನ್ನು ಹೆಚ್ಚುವರಿ ಡಿಜಿಪಿ ಮಮತಾ ಸಿಂಗ್ ಅವರು ನಿರಾಕರಿಸುವ ವೀಡಿಯೊವನ್ನು ಆಲ್ಟ್ ನ್ಯೂಸ್ ನ ಮುಹಮ್ಮದ್ ಝುಬೈರ್ ಅವರು ಶೇರ್ ಮಾಡಿದ್ದಾರೆ.

‘‘ನಾನು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುವಾಗ ಇದೆಲ್ಲವನ್ನೂ ಈಗಾಗಲೇ ನಿರಾಕರಿಸಿದ್ದೇನೆ. ನಾನು ಇದುವರೆಗೆ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳದ ದೂರನ್ನು ಸ್ವೀಕರಿಸಿಲ್ಲ’’ ಎಂದು ಅವರು ಆಲ್ಟ್ ನ್ಯೂಸ್ಗೆ ತಿಳಿಸಿದ್ದಾರೆ.

‘‘ದಾರಿ ತಪ್ಪಿಸುವ ಪ್ರತಿಪಾದನೆಯನ್ನು ಶೇರ್ ಮಾಡುವ ಸಾಮಾಜಿಕ ಮಾಧ್ಯಮದ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಂತಹ ಖಾತೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಮಮತಾ ಸಿಂಗ್ ಹೇಳಿದ್ದಾರೆ.

ಪ್ರಚೋದನಕಾರಿ ಹಾಗೂ ದೃಢೀಕರಿಸದ ಪ್ರತಿಪಾದನೆಯನ್ನು ಪ್ರಸಾರ ಮಾಡುವ ಕೆಲವು ಚಾನೆಲ್ಗಳನ್ನು ಕೂಡ ಆಲ್ಟ್ ನ್ಯೂಸ್ ಪಟ್ಟಿ ಮಾಡಿದೆ. ಅವುಗಳೆಂದರೆ ಎಟುಝಡ್ ಟಿವಿ, ಲೀಡಿಂಗ್ ಭಾರತ್ ಟಿ.ವಿ. ಹಾಗೂ ಹಿಂದೂಸ್ತಾನ್ 9 ನ್ಯೂಸ್. ಎಟುಝಡ್ ನ್ಯೂಸ್ ಟಿ.ವಿ.ಯನ್ನು ನಡೆಸುತ್ತಿರುವವರಲ್ಲಿ ಮನೋಜ್ ಕುಮಾರ್ ಒಬ್ಬರು. ಅವರು ಮೇವತ್ಗೆ ಸಂಬಂಧಿಸಿದ ಹಲವು ವೀಡಿಯೊಗಳನ್ನು ಶೇರ್ ಮಾಡಿದ್ದಾರೆ ಎಂದು ಮುಹಮ್ಮದ್ ಝುಬೈರ್ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News