×
Ad

ವಿಹಿಂಪ, ಬಜರಂಗದಳ ಪ್ರತಿಭಟನೆ ವೇಳೆ ಹಿಂಸೆ, ದ್ವೇಷದ ಭಾಷಣ ಇರದಂತೆ ನೋಡಿಕೊಳ್ಳಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

Update: 2023-08-02 15:53 IST

ಹೊಸದಿಲ್ಲಿ: ವಿಶ್ವ ಹಿಂದೂ ಪರಿಷದ್‌ ಮತ್ತು ಬಜರಂಗದಳವು ದಿಲ್ಲಿ-ಎನ್‌ಸಿಆರ್‌ ನಲ್ಲಿ ಆಯೋಜಿಸುವ ಪ್ರತಿಭಟನೆಗಳ ವೇಳೆ ಯಾವುದೇ ದ್ವೇಷದ ಭಾಷಣ ಅಥವಾ ಹಿಂಸೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಇಂದು ನಿರ್ದೇಶನ ನೀಡಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್‌ ಪಡೆ ಅಥವಾ ಅರೆಸೇನಾ ಪಡೆಗಳನ್ನು ನಿಯೋಜಿಸಬೇಕು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಎಸ್‌ ವಿ ಭಟ್ಟಿ ಅವರ ಪೀಠ ಹೇಳಿದೆ.

ವಿಹಿಂಪ ಮತ್ತು ಬಜರಂಗದಳ ದಿಲ್ಲಿ ಮತ್ತು ಎನ್‌ಸಿಆರ್‌ನಲ್ಲಿ 23 ಪ್ರತಿಭಟನೆಗಳನ್ನು ಘೋಷಿಸಿವೆ ಎಂದು ಪತ್ರಕರ್ತ ಶಹೀನ್‌ ಅಬ್ದುಲ್ಲಾ ಪರ ವಾದಿಸಿದ ಹಿರಿಯ ವಕೀಲ ಸಿ ಯು ಸಿಂಗ್‌ ನ್ಯಾಯಾಲಯದ ಗಮನ ಸೆಳೆದಾಗ ಮೇಲಿನ ಆದೇಶ ಹೊರಡಿಸಲಾಗಿದೆ.

ಜುಲೈ 31ರಂದು ನೂಹ್‌ ಎಂಬಲ್ಲಿ ವಿಹಿಂಪ ಮೆರವಣಿಗೆಯನ್ನು ಗುಂಪೊಂದು ತಡೆಯಲು ಯತ್ನಿಸಿದಾಗ ಉಂಟಾದ ಮತೀಯ ಘರ್ಷಣೆಯಲ್ಲಿ ಇಬ್ಬರು ಹೋಂಗಾರ್ಡ್‌ಗಳ ಸಹಿತ ಆರು ಜನರು ಗಾಯಗೊಂಡಿದ್ದರು. ಘಟನೆ ಸಂಬಂಧ ಇಲ್ಲಿಯ ತನಕ 116 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News