×
Ad

ಸೆ. 13ರಂದು ‘ಇಂಡಿಯಾ’ ಸಮನ್ವಯ ಸಮಿತಿಯ ಮೊದಲ ಸಭೆ

Update: 2023-09-08 22:15 IST

Photo: PTI 

ಹೊಸದಿಲ್ಲಿ: ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ದ ಸಮನ್ವಯ ಸಮಿತಿ ಮತ್ತು ಚುನಾವಣಾ ತಂತ್ರಗಾರಿಕೆ ಸಮಿತಿಯ ಮೊದಲ ಸಭೆಯು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಹೊಸದಿಲ್ಲಿಯ ನಿವಾಸದಲ್ಲಿ ಸೆಪ್ಟಂಬರ್ 13ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಯ ಮೈತ್ರಿಕೂಟದ ಪ್ರಥಮ ಜಂಟಿ ಸಾರ್ವಜನಿಕ ಸಭೆಯ ದಿನಾಂಕ ಮತ್ತು ಸ್ಥಳದ ಬಗ್ಗೆ ಸೆಪ್ಟಂಬರ್ 13ರಂದು ಚರ್ಚೆ ನಡೆಯುವುದು ಎಂದು ಅವು ಹೇಳಿವೆ. ರಾಜಸ್ಥಾನ, ಛತ್ತೀಸ್ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ- ಈ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಸ್ಥಾನ ಹಂಚಿಕೆ ಮತ್ತು ಜಂಟಿ ತಂತ್ರಗಾರಿಕೆ ರೂಪಿಸುವುದು ಆ ಸಭೆಯ ಇನ್ನೊಂದು ಪ್ರಮುಖ ವಿಷಯವಾಗಿರುತ್ತದೆ.

‘‘ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ರಾಜ್ಯಗಳ ಮಟ್ಟದಲ್ಲಿ ನಾವು ಹೇಗೆ ಮಾರ್ಗದರ್ಶನ ಮಾಡಬಹುದು ಹಾಗೂ ವಿಷಯಗಳನ್ನು ಹೇಗೆ ಇತ್ಯರ್ಥ ಮಾಡಬಹುದು ಎಂಬ ಬಗ್ಗೆ ನಾವು ಅಲ್ಲಿ ಚರ್ಚೆ ಮಾಡುತ್ತೇವೆ’’ ಎಂದು ಸಮಿತಿಯ ಭಾಗವಾಗಿರುವ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ‘ನ್ಯೂಸ್ 18’ ಜೊತೆ ಮಾತನಾಡುತ್ತಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News