×
Ad

"ದೇವಾಲಯಕ್ಕೆ ಬಂದು ಕ್ಷಮೆ ಕೇಳಿ, ಇಲ್ಲಾಂದ್ರೆ 5 ಕೋಟಿ ರೂ. ಪಾವತಿಸಿ": ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

Update: 2024-11-05 10:42 IST

ಸಲ್ಮಾನ್ ಖಾನ್ (Photo: PTI)

ಹೊಸದಿಲ್ಲಿ: ಸಲ್ಮಾನ್ ಖಾನ್ ಜೀವಂತವಾಗಿರಬೇಕಾದರೆ ಬಿಷ್ಣೋಯ್ ಸಮುದಾಯದ ದೇವಾಲಯಕ್ಕೆ ಬಂದು ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂ. ಪಾವತಿಸಬೇಕು ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಸಂದೇಶವನ್ನು ಕಳುಹಿಸಿದೆ ಎಂದು NDTV ವರದಿ ಮಾಡಿದೆ.

ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಂಗೆ ನಿನ್ನೆ ರಾತ್ರಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಟ್ರಾಫಿಕ್ ಕಂಟ್ರೋಲ್ ರೂಮ್ಗೆ ಕಳುಹಿಸಲಾದ ಸಂದೇಶದಲ್ಲಿ "ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಸಲ್ಮಾನ್ ಖಾನ್ ಜೀವಂತವಾಗಿರಬೇಕಾದರೆ ನಮ್ಮ ದೇವಾಲಯಕ್ಕೆ ಬಂದು ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂ. ನೀಡಬೇಕು. ಈ ರೀತಿ ಮಾಡದಿದ್ದರೆ ನಾವು ಅವರನ್ನು ಕೊಲೆ ಮಾಡುತ್ತೇವೆ, ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ ಎಂದು ಹೇಳಲಾಗಿದೆ.

ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಈ ಮೊದಲು ಕೂಡ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ್ದ. ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಬಿಷ್ಣೋಯಿ ಸಮುದಾಯದ ಕ್ಷಮೆಕೋರಿದ ನಂತರವೇ ಈ ವಿಚಾರ ಅಂತ್ಯಗೊಳ್ಳಲಿದೆ. ಸಲ್ಮಾನ್ ಅಹಂಕಾರಿ, ಮೂಸೆವಾಲ ಕೂಡ ಹಾಗೆಯೇ ಇದ್ದ. ಸಲ್ಮಾನ್ ಅವರ ಅಹಂ ರಾವಣನ ಅಹಂಗಿಂತಲೂ ದೊಡ್ಡದು ಎಂದು ಹೇಳಿಕೊಂಡಿದ್ದ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News