×
Ad

ಇಬ್ಬರು ಸರ್ವಾಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡಿರುವುದು ನಾಚಿಕೆಗೇಡು : ಶಾಂಘೈ ಶೃಂಗಸಭೆಯಲ್ಲಿ ಭಾಗವಹಿಸಿದ ಮೋದಿ ವಿರುದ್ಧ ಟ್ರಂಪ್ ಆಪ್ತ ಟೀಕೆ

Update: 2025-09-02 10:52 IST

Photo | timesofindia

ವಾಷಿಂಗ್ಟನ್: ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ "ಇಬ್ಬರು ದೊಡ್ಡ ಸರ್ವಾಧಿಕಾರಿಗಳೊಂದಿಗೆ" ವೇದಿಕೆಯನ್ನು ಹಂಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಲಹೆಗಾರ ಪೀಟರ್ ನವರೊ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನವರೊ, ಪ್ರಧಾನಿ ಮೋದಿ ಯುರೋಪ್ ಮತ್ತು ಉಕ್ರೇನ್‌ ಜೊತೆ ಇರಬೇಕು ಮತ್ತು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಉಕ್ರೇನ್‌ನಲ್ಲಿ ಶಾಂತಿಯ ಹಾದಿಯು ಹಲವು ವಿಧಗಳಲ್ಲಿ ಭಾರತದ ಮೂಲಕ ಸಾಗುತ್ತದೆ. ಮೋದಿ ನಿರ್ಧಾರ ತೆಗೆದುಕೊಳ್ಳುವ ಸಮಯವಿದು. ನನಗೆ ಮೋದಿಯ ಬಗ್ಗೆ ಅಪಾರ ಗೌರವವಿದೆ. ನಾನು ಭಾರತೀಯರನ್ನು ಪ್ರೀತಿಸುತ್ತೇನೆ. ವಿಶ್ವದ ಇಬ್ಬರು ದೊಡ್ಡ ಸರ್ವಾಧಿಕಾರಿಗಳಾದ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್‌ ಅವರೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕರಾದ ಮೋದಿ ಕೈಜೋಡಿಸುವುದು ನಾಚಿಕೆಗೇಡಿನ ಸಂಗತಿ ಎಂದು ನವರೊ ಹೇಳಿದರು.

ಭಾರತವು ಯುರೋಪ್ ಮತ್ತು ಉಕ್ರೇನ್‌ನೊಂದಿಗೆ ಇರಬೇಕು ಮತ್ತು ರಷ್ಯಾದೊಂದಿಗೆ ಅಲ್ಲ ಮತ್ತು ಅವರು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ನಾವು ಭಾವಿಸುತ್ತೇವೆ ಎಂದು ಪೀಟರ್ ನವರೊ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News