×
Ad

ಮೂತ್ರ ವಿಸರ್ಜನೆ ಪ್ರಕರಣ: ಆದಿವಾಸಿ ವ್ಯಕ್ತಿಯ ಪಾದಪೂಜೆ ಮಾಡಿದ ಮಧ್ಯಪ್ರದೇಶ ಸಿಎಂ ಚೌಹಾಣ್

Update: 2023-07-06 12:18 IST

Photo: Twitter/@ChouhanShivraj

ಭೋಪಾಲ್: ಬಿಜೆಪಿಯ ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜಿಸಿದ್ದ ಆದಿವಾಸಿ ವ್ಯಕ್ತಿ ದಶ್ಮತ್ ರಾವತ್‌ ರ ಪಾದಗಳನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೊಳೆದಿದ್ದಾರೆ. ANI ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೊದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆ ವ್ಯಕ್ತಿಯ ಪಾದಗಳನ್ನೂ ತೊಳೆದಿದ್ದು, ನಂತರ ಅವರಿಗೆ ಮಾಲಾರ್ಪಣೆ ಮಾಡಿದ್ದಾರೆ. 

ಮುಖ್ಯಮಂತ್ರಿಗಳಿಂದ ಪಾದ ತೊಳೆಸಿಕೊಳ್ಳಲು ತನ್ನ ಪಾದರಕ್ಷೆಯನ್ನು ಬಿಚ್ಚಲು ಅವರು ಮೊದಲಿಗೆ ಹಿಂಜರಿದರೂ, ಹಾಗೇ ಮಾಡಲೇಬೇಕೆಂದು ಮುಖ್ಯಮಂತ್ರಿ ಆಗ್ರಹಿಸಿದರು.

"ನನಗೆ ಆ ವಿಡಿಯೊ ನೋಡಿ ನೋವಾಯಿತು. ನಾನು ನಿನ್ನ ಕ್ಷಮೆ ಕೋರುತ್ತೇನೆ. ನನ್ನ ಪಾಲಿಗೆ ಜನರು ದೇವರಿದ್ದಂತೆ" ಎಂದು ಚೌಹಾಣ್ ಆತನನ್ನುದ್ದೇಶಿಸಿ ಹೇಳಿದ್ದಾರೆ.

ಸರ್ಕಾರದ ಆದೇಶದ ಮೇರೆಗೆ ಪ್ರವೇಶ್ ಶುಕ್ಲಾನ ನಿವಾಸದ ಮೇಲೆ ದಾಳಿ ನಡೆಸಿ, ಆತನನ್ನು ಬಂಧಿಸಲಾಗಿದೆ. ಆದರೆ, ಈ ಕ್ರಮಕ್ಕೆ ಪ್ರವೇಶ್ ಶುಕ್ಲಾನ ಕುಟುಂಬದ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದ್ದು, ಈ ವಿಡಿಯೊ ಹಳೆಯದಾಗಿದ್ದು, ಚುನಾವಣೆಗೂ ಮುಂಚಿತವಾಗಿ ಆತನ ರಾಜಕೀಯ ವಿರೋಧಿಗಳು ಹೊರ ತೆಗೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರವೇಶ್ ಶುಕ್ಲಾನ ತಂದೆ, "ನನ್ನ ಪುತ್ರ ಹೀಗೆಲ್ಲ ಮಾಡಲು ಸಾಧ್ಯವೇ ಇಲ್ಲ. ಆತನನ್ನು ಸಿಲುಕಿಸಲು ಇದರಲ್ಲೇನೋ ಪಿತೂರಿ ಇರುವಂತಿದೆ. ನಾವೂ ಕೂಡಾ ಆ ವಿಡಿಯೊ ನೋಡಿ ದಿಗ್ಭ್ರಾಂತಗೊಂಡೆವು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News