ಜಮ್ಮುಕಾಶ್ಮೀರ | ಪೂಂಚ್‌ನ ಗಡಿ ನಿಯಂತ್ರಣ ರೇಖೆ ಬಳಿ ನೆಲಬಾಂಬ್ ಸ್ಪೋಟ : ಓರ್ವ ಸೈನಿಕ ಮೃತ್ಯು, ಇಬ್ಬರಿಗೆ ಗಾಯ
Update: 2025-07-25 18:51 IST
Photo | PTI
ಪೂಂಚ್ : ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನೆಲಬಾಂಬ್ ಸ್ಫೋಟದಲ್ಲಿ ಓರ್ವ ಸೈನಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿವೀರ್ ಲಲಿತ್ ಕುಮಾರ್ ಮೃತ ಯೋಧ. ಗಾಯಾಗೊಂಡ ಇಬ್ಬರು ಸೈನಿಕರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಕೃಷ್ಣ ಘಾಟಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಮೃತಪಟ್ಟ 7 ಜೆಎಟಿ ರೆಜಿಮೆಂಟ್‌ನ ಅಗ್ನಿವೀರ್ ಲಲಿತ್ ಕುಮಾರ್ ಅವರಿಗೆ ಸೇನೆ ಶ್ರದ್ಧಾಂಜಲಿ ಅರ್ಪಿಸಿದೆ. ಈ ಸಮಯದಲ್ಲಿ ನಾವು ದುಃಖಿತ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ವೈಟ್ ನೈಟ್ ಕಾರ್ಪ್ಸ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.