×
Ad

ನೂತನ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್‌, ಸುಖಬೀರ್‌ ಸಂಧು ಆಯ್ಕೆ: ಅಧೀರ್‌ ರಂಜನ್‌ ಚೌಧುರಿ

Update: 2024-03-14 13:56 IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಸಮಿತಿಯು ಇಂದು ಜ್ಞಾನೇಶ್‌ ಕುಮಾರ್‌ ಮತ್ತು ಸುಖಬೀರ್‌ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆಮಾಡಿದೆ ಎಂದು ಸಮಿತಿಯ ಸಭೆಯ ನಂತರ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧುರಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆಯೆನ್ನುವಾಗ ಚುನಾವಣಾ ಆಯುಕ್ತ ಅರುಣ್‌ ಗೋಯಲ್‌ ಅವರ ಅಚ್ಚರಿಯ ರಾಜೀನಾಮೆ ನಂತರ ಈ ಆಯ್ಕೆಗಳು ನಡೆದಿವೆ. ಗೋಯೆಲ್‌ ಅವರ ಸೇವಾವಧಿ ಡಿಸೆಂಬರ್‌ 2027ರವರೆಗೆ ಇದ್ದರೂ ಅವರು ಮಾರ್ಚ್‌ 9ರಂದು ರಾಜೀನಾಮೆ ನೀಡಿದ್ದರು.

ಚುನಾವಣಾ ಆಯುಕ್ತರ ನೇಮಕಾತಿ ಕುರಿತಾದ ಹೊಸ ಕಾನೂನಿನಂತೆ ರಚಿಸಲಾದ ಸಮಿತಿಯು ನಡೆಸಿದ ಮೊದಲ ಆಯ್ಕೆಗಳು ಇವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News