×
Ad

ಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಖುಲಾಸೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2024-01-09 16:26 IST

ಅಜಯ್ ಮಿಶ್ರಾ ತೇನಿ (Photo: PTI)

ಹೊಸದಿಲ್ಲಿ: 2000ರಲ್ಲಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಠೇಣಿಯನ್ನು ಖುಲಾಸೆಗೊಳಿಸಿದ ಕ್ರಮವನ್ನು ಸೋಮವಾರ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು Live Law ವರದಿ ಮಾಡಿದೆ.

ಅಲಹಾಬಾದ್ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯವು ಪತ್ತೆ ಮಾಡಿರುವ ವರ್ತಮಾನದ ಸಂಗತಿಗಳ ನಡುವೆ ತಾನು ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ನ್ಯಾ. ಬೇಲಾ ಎಂ. ತ್ರಿವೇದಿ ಹಾಗೂ ಪಂಕಜ್ ಮಿತ್ತಲ್ ಅವರನ್ನೊಳಗೊಂಡಿದ್ದ ನ್ಯಾಯಪೀಠವು ಹೇಳಿದೆ.

ಈ ಪ್ರಕರಣವು ಉತ್ತರ ಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯ ಟಿಕೋನಿಯಾದಲ್ಲಿನ ತಮ್ಮ ನಿವಾಸದ ಬಳಿ ಗುಂಡೇಟಿಗೆ ಬಲಿಯಾಗಿದ್ದ ವಿದ್ಯಾರ್ಥಿ ನಾಯಕ ಪ್ರಭಾತ್ ಗುಪ್ತಾಗೆ ಸಂಬಂಧಿಸಿದ್ದಾಗಿದೆ. ಠೇಣಿ ಹಾಗೂ ಇನ್ನೂ ಮೂವರನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿತ್ತು.

ಹತ್ಯೆಗೀಡಾಗಿದ್ದ ಪ್ರಭಾತ್ ಗುಪ್ತಾ ಮತ್ತು ತೇನಿ ಹಾಗೂ ಮತ್ತೊಬ್ಬ ಆರೋಪಿ ಸುಭಾಷ್ ನಡುವೆ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ವೈಮನಸ್ಯವಿತ್ತು. ಹೀಗಾಗಿ ಅವರನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ ಎಂದು ಆರೋಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News