×
Ad

‘‘ನಾನು ಶರಣಾಗಲು ಬಂದಿದ್ದೇನೆ, ಗುಂಡು ಹಾರಿಸಬೇಡಿ’’ ಎಂಬ ಫಲಕದೊಂದಿಗೆ ಶರಣಾದ ಆರೋಪಿ

Update: 2023-08-30 21:40 IST

Photo: Twitter \ @gondapolice

ಗೊಂಡ (ಉತ್ತರಪ್ರದೇಶ): ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿಯೊಬ್ಬ ‘‘ನಾನು ಶರಣಾಗಲು ಬಂದಿದ್ದೇನೆ, ನನ್ನ ಮೇಲೆ ಗುಂಡು ಹಾರಿಸಬೇಡಿ’’ ಎಂಬ ಫಲಕವನ್ನು ಕುತ್ತಿಗೆಗೆ ನೇತುಹಾಕಿ ಉತ್ತರಪ್ರದೇಶದ ಗೊಂಡ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಆರೋಪಿ ಅಂಕಿತ್ ವರ್ಮ ಆರು ತಿಂಗಳಿನಿಂದ ಪೊಲೀಸರಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದನು.

‘‘ಪೊಲೀಸರ ಬಗ್ಗೆ ಕ್ರಿಮಿನಲ್ಗಳಿಗೆ ಇರುವ ಭಯದಿಂದಾಗಿ ಅವರು ಶರಣಾಗುತ್ತಿದ್ದಾರೆ’’ ಎಂದು ಸರ್ಕಲ್ ಇನ್ಸ್ಪೆಕ್ಟರ್ ನವೀನ ಶುಕ್ಲಾ ಅಭಿಪ್ರಾಯಪಟ್ಟರು.

ಫೆಬ್ರವರಿ 20ರಂದು ನಾನು ಕಾಲೇಜಿನಿಂದ ಮೋಟರ್ಸೈಕಲ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಪಿಪ್ರಾಹಿ ಸೇತುವೆಯ ಸಮೀಪ ನನ್ನನ್ನು ತಡೆದು ನಿಲ್ಲಿಸಿಬಂದೂಕು ತೋರಿಸಿ ನನ್ನ ಬೈಕ್, ಮೊಬೈಲ್ ಫೋನ್ ಮತ್ತು ಪರ್ಸನ್ನು ದರೋಡೆ ಮಾಡಿದ್ದಾರೆ ಎಂದು ಅಮರ್ಜಿತ್ ಚೌಹಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

ಈಗ ಇಬ್ಬರು ಆರೋಪಿಗಳ ಪೈಕಿ ಅಂಕಿತ್ ವರ್ಮ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಗಳ ತಲೆಗೆ 20,000 ರೂ. ಬಹುಮಾನ ಘೋಷಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News